ಅಬುಧಾಬಿ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್‌ನಲ್ಲಿ ಗೇಲ್ ಅತೀ ವೇಗದ ಅರ್ಧಶತಕ ಚಚ್ಚಿದ್ದಾರೆ. ಬುಧವಾರ (ಫೆಬ್ರವರಿ 3) ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಅಬುಧಾಬಿ ತಂಡದ ಗೇಲ್ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಮರಾಠಾ ಅರೇಬಿಯನ್ಸ್ ಶರಣಾಗಿದೆ. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 22 ಎಸೆತಗಳಲ್ಲಿ ಅಜೇಯ 84 ರನ್ ಚಚ್ಚಿದ್ದಾರೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಮರಾಠಾ ಅರೇಬಿಯನ್ಸ್ 10 ಓವರ್‌ಗಳಲ್ಲಿ 4 ವಿಕೆಟ್ ಕಳೆದು 97 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಿದ ಅಬುಧಾಬಿ ತಂಡ, ಕ್ರಿಸ್ ಗೇಲ್ ಅಜೇಯ 84 ರನ್‌ನೊಂದಿಗೆ 5.3 ಓವರ್‌ಗೆ 1 ವಿಕೆಟ್ ನಷ್ಟಕ್ಕೆ ಭರ್ತಿ 100 ರನ್ ಗಳಿಸಿತು.
PublicNext
04/02/2021 09:41 am