ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮುದ್ದು ಮಗಳಿಗೆ ‘ವಮಿಕಾ’ ಎನ್ನುವ ಹೆಸರಿಡುವ ಮೂಲಕವಾಗಿ ನಾಮಕರಣ ಮಾಡಿದ್ದಾರೆ.
ಪುತ್ರಿಯನ್ನು ಎತ್ತಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡುರುವ ವಿರುಷ್ಕಾ ದಂಪತಿ, ''ನಾವಿಬ್ಬರು ಪ್ರೀತಿ, ಕೃತಜ್ಞತೆಯಿಂದ ಬದುಕಿದಂತೆ ವಮಿಕಾಳನ್ನು ಕೂಡ ನಡೆಸಿಕೊಂಡು ಹೋಗುತ್ತೇವೆ. ವಮಿಕಾ ನಮ್ಮ ಜೀವನದಲ್ಲಿ ಬಂದು ಅದೆಲ್ಲವನ್ನು ಮತ್ತೊಂದು ಹಂತಕ್ಕೆ ತಂದಿದ್ದಾಳೆ. ಕೆಲವೊಂದು ಸಂದರ್ಭದಲ್ಲಾದರೂ ಅಳು, ನಗು, ಚಿಂತೆ, ಆನಂದ ಭಾವನೆಗಳನ್ನು ಅನುಭವಿಸಿದ್ದೇವೆ. ಇತ್ತೀಚೆಗೆ ನಿದ್ದೆ ಅಸ್ಪಷ್ಟವಾಗಿದೆ. ಆದರೆ ಹೃದಯ ತುಂಬಿದೆ. ನಿಮ್ಮೆಲ್ಲರ ಆಶೀರ್ವಾದ ಶುಭಾಶಯ, ಪ್ರೀತಿಗೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.
ವಮಿಕಾ ಅರ್ಥವೇನು?
ವಿರುಷ್ಕಾ ದಂಪತಿ ಪುತ್ರಿಯ ಹೆಸರನ್ನು ತಿಳಿಸುತ್ತಿದ್ದಂತೆ ನೆಟ್ಟಿಗರು 'ವಮಿಕಾ' ಅರ್ಥವೇನು? ಎಂದು ಹುಡುಕಾಡಿದ್ದಾರೆ. ಈ ಹೆಸರನ್ನು ನಾನು ಇದುವರೆಗೂ ಕೇಳಿರಲಿಲ್ಲ ಎಂದು ಕೂಡ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಮಿಕಾ ಎನ್ನುವುದು ದುರ್ಗಾ ದೇವಿಯ ಹೆಸರು. ಅರ್ಧನಾರೀಶ್ವರನ ಒಂದು ಸ್ತ್ರೀ ಭಾಗವು ವಮಿಕಾ ಎಂದೂ ಕೆಲವರು ತಿಳಿಸಿದ್ದಾರೆ. ಅರ್ಧನಾರೀಶ್ವರ ಅಂದರೆ ಒಂದೇ ದೇಹದ ಬಲಭಾಗದಲ್ಲಿ ಶಿವ ಹಾಗೂ ಎಡಭಾಗದಲ್ಲಿ ಪಾರ್ವತಿಯೂ ಇರುವ ರೂಪವಾಗಿದೆ.
PublicNext
01/02/2021 04:13 pm