ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ಯುತ್ತಮ ಕಪ್ತಾನಗಿರಿ: ಕೊಹ್ಲಿಯನ್ನು ಹಿಂದಿಕ್ಕಿದ ಇಮ್ರಾನ್ ಖಾನ್

ನವದೆಹಲಿ: ರನ್‌ ಮೆಷಿನ್ ಖ್ಯಾತಿಯ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ನಾಯಕನಾಗಿಯೂ ಮಿಂಚುತ್ತಿರುವ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಿಂದಿಕ್ಕಿದ್ದಾರೆ.

ತಂಡದ ಮುಂದಾಳತ್ವ, ನಾಯಕನಾಗಿ ಅತ್ಯುತ್ತಮ ಪ್ರದರ್ಶನವನ್ನು ಅವಲಂಬಿಸಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತದಾನ ನಡೆಸಿತ್ತು. ಇದರಲ್ಲಿ ವಿರಾಟ್ ಕೊಹ್ಲಿ, ಇಮ್ರಾನ್ ಖಾನ್, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಹಾಗೂ ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಸ್ಪರ್ಧಿಗಳಾಗಿ ಹೆಸರಿಸಿತ್ತು.

ಐಸಿಸಿ ನಡೆಸಿದ ತಂಡದ ಅತ್ಯುತ್ತಮ ಮುಂದಾಳತ್ವದ ಈ ಮತದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಇಮ್ರಾನ್ ಖಾನ್ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಇಮ್ರಾನ್ ಖಾನ್ ಶೇ.47.3 ಮತ ಪಡೆದು ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿರಾಟ್‌ ಕೊಹ್ಲಿ ಅವರಿಗೆ ಶೇ.46.2 ಮತಗಳು ಲಭಿಸಿದೆ. ಉಳಿದಂತೆ ಎಬಿ ಡಿ ವಿಲಿಯರ್ಸ್ ಶೇ.6 ವೋಟ್, ಮೆಗ್‌ ಲ್ಯಾನಿಂಗ್ ಶೇ.0.5 ಮತಗಳನ್ನು ಪಡೆದಿದ್ದಾರೆ.

Edited By : Vijay Kumar
PublicNext

PublicNext

13/01/2021 02:18 pm

Cinque Terre

54.77 K

Cinque Terre

1

ಸಂಬಂಧಿತ ಸುದ್ದಿ