ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸೀಸ್ ನೆಲದಲ್ಲಿ ರಿಷಬ್ ಪಂತ್ ವಿಶೇಷ ಸಾಧನೆ

ಸಿಡ್ನಿ: ಟೀಂ ಇಂಡಿಯಾದ ವಿಕೆಟ್‌ ಕೀಪರ್ ರಿಷಬ್ ಪಂತ್‌ ಆಸ್ಟ್ರೇಲಿಯಾ ನೆಲದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

23ರ ರಿಷಬ್ ಪಂತ್ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ರನ್‌ಗಳಿಂದ ಶತಕವನ್ನು ಕೈಚೆಲ್ಲಿಕೊಂಡರು. ಆದರೂ ಪಂತ್‌ ವಿಶೇಷ ಸಾಧನೆ ಮಾಡುವ ಮೂಲಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 36 ರನ್ ಗಳಿಸಿದ್ದ ಪಂತ್ ಆಸ್ಟ್ರೇಲಿಯಾದಲ್ಲಿ ಒಟ್ಟು 400 ಕ್ಕೂ ಅಧಿಕ ಟೆಸ್ಟ್ ರನ್ ಗಳಿಸಿದ ಸಾಧನೆ ಮಾಡಿದ್ದರು. ಸೋಮವಾರ 97 ರನ್ ಚಚ್ಚಿ ಆಸ್ಟ್ರೇಲಿಯಾ ನೆಲದಲ್ಲಿ ಗರಿಷ್ಠ ರನ್ ಗಳಿಸಿದ ಏಷ್ಯದ ವಿಕೆಟ್‍ ಕೀಪರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಸಯ್ಯದ್ ಕಿರ್ಮಾನಿ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.

ಸಯ್ಯದ್ ಕಿರ್ಮಾನಿ ಅವರು ಆಸ್ಟ್ರೇಲಿಯದಲ್ಲಿ ಒಟ್ಟು 471 ರನ್ ಗಳಿಸಿದ್ದರು. ಪಂತ್ 56.88ರ ಸರಾಸರಿಯಲ್ಲಿ ಒಟ್ಟು 512 ರನ್ ಗಳಿಸಿ ಕಿರ್ಮಾನಿ ಅವರನ್ನು ಹಿಂದಿಕ್ಕಿದ್ದಾರೆ.

Edited By : Vijay Kumar
PublicNext

PublicNext

11/01/2021 06:10 pm

Cinque Terre

34.16 K

Cinque Terre

4

ಸಂಬಂಧಿತ ಸುದ್ದಿ