ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ vs ಆಸ್ಟ್ರೇಲಿಯಾ: ಒಂದೇ ದಿನ 11 ವಿಕೆಟ್‌ ಪತನ

ಮೆಲ್ಬರ್ನ್: ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ದ್ವಿತೀಯ ಟೆಸ್ಟ್ ಸರಣಿಯ ಮೂರನೇ ದಿನವಾದ ಇಂದು 11 ವಿಕೆಟ್‌ ಉರುಳಿವೆ.

ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ಗೆ ಇಳಿದ ಭಾರತ ಶುಭ್‌ಮನ್ ಗಿಲ್ 45 ರನ್, ಚೇತೇಶ್ವರ ಪೂಜಾರ 17 ರನ್, ಅಜಿಂಕ್ಯ ರಹಾನೆ 112 ರನ್, ಹನುಮ ವಿಹಾರಿ 21 ರನ್, ರಿಷಭ್ ಪಂತ್ 29 ರನ್, ರವೀಂದ್ರ ಜಡೇಜಾ 57 ರನ್, ರವಿಚಂದ್ರನ್ ಅಶ್ವಿನ್ 14 ರನ್, ಉಮೇಶ್ ಯಾದವ್ 9 ರನ್‌ನೊಂದಿಗೆ ಎಲ್ಲಾ ವಿಕೆಟ್ ಕಳೆದು 326 ರನ್ ಗಳಿಸಿತು.

131 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಟೀಂ ಇಂಡಿಯಾ ಬೌಲರ್‌ ಕಾಡಿದರು. ಪರಿಣಾಮ ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು ಪ್ರಮುಖ 6 ವಿಕೆಟ್‌ ನಷ್ಟಕ್ಕೆ 133 ರನ್‌ ಕಲೆ ಹಾಕಿದೆ. ಈ ಮೂಲಕ ಎರಡು ರನ್‌ಗಳ ಮುನ್ನಡೆ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್‌:

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌: 195/10

ಭಾರತದ ಮೊದಲ ಇನ್ನಿಂಗ್ಸ್‌: 326/10 ಸ

ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌: 133/6

Edited By : Vijay Kumar
PublicNext

PublicNext

28/12/2020 04:51 pm

Cinque Terre

34.21 K

Cinque Terre

1

ಸಂಬಂಧಿತ ಸುದ್ದಿ