ಅಬುಧಾಬಿ: ನಾಯಕ ರೋಹಿತ್ ಶರ್ಮಾ ಸಿಕ್ಸರ್ ಸುರಿಮಳೆ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯ್ಸ್ ತಂಡವು ಕೆಕೆಆರ್‌ಗೆ 196 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿದೆ.
ಅಬುಧಾಬಿಯ ಶೇಖ್ ಝಯಾದ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ನ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ರೋಹಿತ್ ಶರ್ಮಾ 80 ರನ್ (54 ಎಸೆತ, 3 ಬೌಂಡರಿ, 6 ಸಿಕ್ಸರ್), ಸೂರ್ಯಕುಮಾರ್ ಯಾದವ್ 47 ರನ್ (28 ಎಸೆತ, 6 ಬೌಂಡರಿ, 1 ಸಿಕ್ಸ್) ಹಾಗೂ ಸೌರಭ್ ತಿವಾರಿ 21 ರನ್‌ಗಳ ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 195 ರನ್ ದಾಖಲಿಸಿದೆ.
ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಪ್ರಮುಖ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (1ರನ್) ಶಿವಂ ಮಾವಿ ಅವರ 2ನೇ ಓವರ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು. ಇದರ ಬೆನ್ನಲ್ಲೇ ಕ್ರೀಸ್ಗಿಳಿದ ಸೂರ್ಯಕುಮಾರ್ ಯಾದವ್ ಮೂರನೇ ಓವರ್ನಲ್ಲಿ ನಾಲ್ಕು ಬೌಂಡರಿ ಬಾರಿಸುವ ಮೂಲಕ 16 ರನ್ ಕಲೆಹಾಕಿದರು. ಅಲ್ಲದೆ ನಾಯಕನ ಜೊತೆಗೂಡಿ 27 ಎಸೆತಗಳಲ್ಲಿ 50 ರನ್‌ಗಳ ಸ್ಪೋಟಕ ಜೊತೆಯಾಟವಾಡಿದರು. ಪರಿಣಾಮ ಪವರ್ಪ್ಲೇ ನಲ್ಲಿ ಮುಂಬೈ ಇಂಡಿಯನ್ಸ್ 59 ರನ್ ಗಳಿಸಿತು. ಆದರೆ 47 ರನ್ ಗಳಿಸಿದ್ದ ಸೂರ್ಯಕುಮಾರ್ ವಿಕೆಟ್ ಒಪ್ಪಿಸಿದರು. ಬಳಿಕ ಸೌರಭ್ ತಿವಾರಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ರೋಹಿತ್ ಶರ್ಮಾ ಅಮೋಘ 80 ರನ್ ಚಚ್ಚಿ ವಿಕೆಟ್ ಕಳೆದುಕೊಂಡರು. ಈ ಪಂದ್ಯದಲ್ಲೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (18 ರನ್) ಬ್ಯಾಟಿಂಗ್‌ನಲ್ಲಿ ನಿರಾಶೆ ಮೂಡಿಸಿದರು.
ಕೋಲ್ಕತ್ತಾ ತಂಡದ ಪರ ಶಿವಂ ಮಾವಿ ಎರಡು ವಿಕೆಟ್ ಕಬಳಿಸಿದರೆ, ಸುನೀಲ್ ನಾರಾಯಣ್ ಹಾಗೂ ಆಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದರು.
PublicNext
23/09/2020 09:44 pm