ಅಬುಧಾಬಿ: ಅಂಬಾಟಿ ರಾಯುಡು ಭರ್ಜರಿ ಬ್ಯಾಟಿಂಗ್ ಹಾಗೂ ಫಾಫ್ ಡು ಪ್ಲೆಸಿ ತಾಳ್ಮೆಯ ಬ್ಯಾಟಿಂಗ್ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯ್ಸ್ ತಂಡದ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಮುಂಬೈ ಇಂಡಿಯ್ಸ್ ನೀಡಿದ್ದ 163 ರನ್ ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ ಆರಂಭದಲ್ಲಿ ಆಘಾತ ಅನುಭವಿಸಿತು. ಅನುಭವಿ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮುರುಳಿ ವಿಜಯ್ ಹಾಗೂ ಶೇನ್ ವಾಟ್ಸನ್ ಬಹುಬೇಗ ವಿಕೆಟ್ ಕಳೆದುಕೊಂಡರು. ಬಳಿಕ ಫಾಫ್ ಡು ಪ್ಲೆಸಿ ಹಾಗೂ ಅಂಬಟಿ ರಾಯುಡು ವಿಕೆಟ್ ಕಾಯ್ದುಕೊಂಡು ಉತ್ತಮ ಜೊತೆಯಾಟ ಕಟ್ಟಿಕೊಟ್ಟಿತು. ಮೂರನೇ ವಿಕೆಟ್ ನಷ್ಟಕ್ಕೆ ಪ್ಲೆಸಿ ಹಾಗೂ ರಾಯುಡು ಜೋಡಿಯು 115 ರನ್ ಕಲೆಹಾಕಿತು. ಈ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿತು.
ಸ್ಕೋರ್ ವಿವರ:
ಮುಂಬೈ ಇಂಡಿಯ್ಸ್ ತಂಡದ ನಾಯಕ ರೋಹಿತ್ ಶರ್ಮಾ 12 ರನ್, ಕ್ವಿಂಟನ್ ಡಿ ಕಾಕ್ 33 ರನ್) ಸೂರ್ಯಕುಮಾರ್ ಯಾದವ್ 17 ರನ್, ಸೌರಭ್ ತಿವಾರಿ 42 ರನ್, ಹಾರ್ದಿಕ್ ಪಾಂಡ್ಯ 14, ರನ್), ಕೀರನ್ ಪೊಲಾರ್ಡ್ 18 ರನ್, ಕೃಣಾಲ್ ಪಾಂಡ್ಯ 3 ರನ್, ಜೇಮ್ಸ್ ಪ್ಯಾಟಿನ್ಸನ್ 11 ರನ್, ರಾಹುಲ್ ಚಾಹರ್ ಔಟಾಗದೆ 2 ರನ್, ಟ್ರೆಂಟ್ ಬೌಲ್ಟ್ 0 ರನ್, ಜಸ್‌ಪ್ರೀತ್ ಬೂಮ್ರಾ 5 ರನ್ ಬಾರಿಸಿದ್ದರು.
ಬಳಿಕ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಮುರುಳಿ ವಿಜಯ್ 1 ರನ್, ಶೇನ್ ವಾಟ್ಸನ್ 4 ರನ್, ಫಾಫ್ ಡು ಪ್ಲೆಸಿ ಔಟಾಗದೆ 58 ರನ್, ಅಂಬಟಿ ರಾಯುಡು ರನ್ 71 ರನ್, ರವೀಂದ್ರ ಜಡೇಜ 10, ಸ್ಯಾಮ್ ಕರನ್ 18 ರನ್ ಹಾಗೂ ಎಂ.ಎಸ್.ಧೋನಿ ಔಟಾಗದೆ 0 ರನ್ ದಾಖಲಿಸಿದರು.
PublicNext
19/09/2020 11:26 pm