ಅಬುಧಾಬಿ: ಭಾರೀ ಕುತೂಹಲ ಕೆರಳಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಅಬುಧಾಬಿಯಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ತಂಡ ನೀಡಿದ್ದ 143 ರನ್‌ಗಳ ಗುರಿಯನ್ನು 12 ಎಸೆತಗಳು ಬಾಕಿ ಇರುವಾಗಲೇ ದಿನೇಶ್ ಕಾರ್ತಿಕ್ ಪಡೆ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆದ್ದು ಬೀಗಿದೆ. ಕೋಲ್ಕತ್ತಾ ತಂಡದ ಪರ ಯುವ ಆಟಗಾರ ಶುಭ್‌ಮನ್ ಗಿಲ್ 69 ರನ್ (61 ಎಸೆತ, 5 ಬೌಂಡರಿ, 2 ಸಿಕ್ಸರ್), ಇಯಾನ್ ಮೋರ್ಗಾನ್ 42 ರನ್ (29 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ನಿತೀಶ್ ನಾರಾ 26 ರನ್ (13 ಎಸೆತ, 6 ಬೌಂಡರಿ) ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಎಸ್‌ಆರ್‌ಎಚ್ ಮನೀಷ್ ಪಾಂಡ್ಯೆ 51 ರನ್ (38 ಎಸೆತ, 3 ಬೌಂಡರಿ, 2 ಸಿಕ್ಸರ್), ಡೇವಿಡ್ ವಾರ್ನರ್ 36 ರನ್ (30 ಎಸೆತ, 2 ಬೌಂಡರಿ, 1 ಸಿಕ್ಸ್) ಹಾಗೂ ವೃದ್ಧಿಮಾನ್ ಸಾಹ 30 ರನ್ (31 ಎಸೆತ, 1 ಬೌಂಡರಿ, 1 ಸಿಕ್ಸ್) ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 142 ರನ್ ಪೇರಿಸಿತ್ತು.
PublicNext
26/09/2020 11:12 pm