ಬರ್ಮಿಂಗ್‌ಹ್ಯಾಮ್: ನಿನ್ನೆ ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಯೇ ಸುರಿದಿದೆ. ಈ ಲಿಸ್ಟ್‌ನಲ್ಲಿ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ ಗೆದ್ದ ಬೆಳ್ಳಿ ಪದಕವೂ ಕೂಡ ಸೇರಿದೆ.
ಹೌದು, ಸಾಗರ್ ಅಹ್ಲಾವತ್ ಅವರು ಪುರುಷರ 92ಕೆ.ಜಿ ಫೈನಲ್ ವಿಭಾಗದಲ್ಲಿ ಇಂಗ್ಲೆಂಡ್ನ ಡೆಲೀಶಿಯಸ್ ಓರಿಯೊ ವಿರುದ್ಧ 0-5 ಅಂತರದಿಂದ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ನಿನ್ನೆ ನಡೆದ 10 ನೇ ದಿನದ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 14 ಪದಕಗಳನ್ನು ತಮ್ಮದಾಗಿಸಿಕೊಂಡಿದೆ. ಕಾಮನ್‌ವೆಲ್ತ್ ಗೇಮ್ಸ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಭಾರತೀಯ ಅಥ್ಲೀಟ್‌ಗಳು ಒಟ್ಟು 55 ಪದಕ(18 ಚಿನ್ನ, 15 ಬೆಳ್ಳಿ ಮತ್ತು 22 ಕಂಚು)ಗಳನ್ನು ಗೆದ್ದಿದ್ದಾರೆ.
PublicNext
08/08/2022 03:42 pm