ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖೋಖೋ ಆಟಗಾರ 'ಕರ್ನಾಟಕ ರತ್ನ ವಿನಯ್' ಮೆದುಳು ಜ್ವರದಿಂದ ಸಾವು

ಶಿವಮೊಗ್ಗ: ರಾಷ್ಟ್ರೀಯ ಮಟ್ಟದ ಖೋಖೋ ಆಟಗಾರ ತೀರ್ಥಹಳ್ಳಿಯ ಕ್ರೀಡಾ ಸಾಧಕ ವಿನಯ್ ಅವರು ಮೆದುಳು ಜ್ವರದಿಂದ ತಡರಾತ್ರಿ (ಆಗಸ್ಟ್ 8)ಮೃತಪಟ್ಟಿದ್ದಾರೆ. ಅವರಿಗೆ 33 ವರ್ಷ ವಯಸ್ಸಾಗಿತ್ತು.

ಕಳೆದ ಕೆಲದಿನಗಳಿಂದ ಮೆದುಳು ಜ್ವರದಿಂದ ಬಳಲುತ್ತಿದ್ದ ವಿನಯ್‌ರನ್ನು ಉಡುಪಿಯ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ. ವಿನಯ್, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋಖೋ ಕ್ರೀಡೆಯಲ್ಲಿ ಪ್ರತಿನಿಧಿಸಿದ್ದರು. ವಿನಯ್ ಅವರ ಸಾಧನೆಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

Edited By : Nagaraj Tulugeri
PublicNext

PublicNext

09/08/2022 07:33 am

Cinque Terre

101.05 K

Cinque Terre

9