ರಾಂಚಿ: ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಮೊಣಕಾಲು ನೋವಿಗೆ ಕೇವಲ 40 ರೂಪಾಯಿ ಖರ್ಚಿನಲ್ಲಿ ಚಿಕಿತ್ಸೆ ಸಿಕ್ಕಿದೆ. ಅವರೀಗ ಮೊಣಕಾಲು ನೋವಿನಿಂದ ಚೇತರಿಸಿಕೊಂಡಿದ್ದಾರೆ.
ಹೌದು. ಸೆಲೆಬ್ರಿಟಿಗಳಿಗೆ ಯಾವುದೇ ಆರೋಗ್ಯದ ತೊಂದರೆ ಬಂದಲ್ಲಿ ಅದನ್ನು ನಿವಾರಿಸಲು ಹೆಸರಾಂತ ವೈದ್ಯರು ಮುಂದೆ ಬರ್ತಾರೆ. ಸೆಲೆಬ್ರಿಟಿಗಳಿಗೆ ಚಿಕಿತ್ಸೆ ಕೊಡೋದು ಅಂದ್ರೆ ಅವರಿಗೆ ಪ್ರತಿಷ್ಟೆಯ ವಿಚಾರ.
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇತ್ತೀಚಿಗೆ ಮೊಣಕಾಲು ನೋವು ಕಾಣಿಸಿಕೊಂಡಿದೆ. ಇದರ ನಿವರಣೆಗಾಗಿ ಅವರು ಖ್ಯಾತ ವೈದ್ಯರ ಬಳಿ ಅಲೆದಾಡಿದ್ದಾರೆ. ಆದ್ರೆ ಅಲ್ಲೆಲ್ಲೂ ಅವರಿಗೆ ನೋವು ನಿವಾರಣೆಯಾಗುವ ಚಿಕಿತ್ಸೆ ಸಿಕ್ಕಿಲ್ಲ.
ನಂತರ ಡಾಕ್ಟರ್ ವಂದನ್ ಅವರ ಬಗ್ಗೆ ಧೋನಿಗೆ ಗೊತ್ತಾಗಿದೆ. ಇದೂ ಒಂದು ಪ್ರಯತ್ನ ಆಗಿಬಿಡಲಿ ಎಂದು ರಾಂಚಿ ನಗರದಿಂದ 70 ಕಿ.ಮೀ ದೂರದಲ್ಲಿರುವ ಲಪುಂಗ್ ದಟ್ಟಾರಣ್ಯ ಪ್ರದೇಶದಲ್ಲಿ ಆಯುರ್ವೇದ ವೈದ್ಯ ವಂದನ್ ಅವರ ಬಳಿ ಹೋಗಿದ್ದಾರೆ. ಅಲ್ಲಿ ತಪಾಸಣೆ ನಡೆಸಿದ ಪ್ರಕಾರ ಮಹೇಂದ್ರ ಸಿಂಗ್ ಅವರಿಗೆ ಕ್ಯಾಲ್ಸಿಯಂ ಕೊರತೆ ಕಾರಣಕ್ಕೆ ಮೊಣಕಾಲು ನೋವು ಬಂದಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಇದಕ್ಕೆ ವಂದನ್ ಅವರಿಂದ ಔಷಧಿ ಪಡೆದ ಧೋನಿ ಕೆಲವೇ ಅವರ ಮೊಣಕಾಲು ನೋವಿನಲ್ಲಿ ಚೇತರಿಕೆ ಕಂಡಿದ್ದಾರೆ. ಹೀಗಾಗಿ ಮಿಂಚಿನ ಆಟಗಾರ ಧೋನಿ ಅವರು ಆಯುರ್ವೇದ ವೈದ್ಯ ವಂದನ್ ಸಿಂಗ್ ಖೆರ್ವಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಅಂದ್ ಹಾಗೆ ಸಮಾಲೋಚನೆಗಾಗಿ 20 ರೂಪಾಯಿ ಹಾಗೂ ಔಷಧಿ ಖರ್ಚು 20 ರೂಪಾಯಿ ಸೇರಿ ಕೇವಲ 40 ರೂ ಹಣವನ್ನು ಡಾ. ವಂದನ್ ಅವರು ಧೋನಿ ಅವರಿಂದ ಪಡೆದಿದ್ದಾರೆ.
PublicNext
02/07/2022 02:09 pm