ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ ಭಾಗವಾಗಿ ಭಾನುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಮುನ್ನಡೆ ಸಾಧಿಸಿದೆ. ಆದರೆ ಪಂಜಾಬ್ ತಂಡದ ಸೋಲಿಗೆ ಕಾರಣವಾದ ಅಂಪೈರ್ ತಪ್ಪು ನಿರ್ಧಾರದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್, ಈ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಆಯ್ಕೆಯನ್ನು ನಾನು ಒಪ್ಪುವುದಿಲ್ಲ. ಅದನ್ನು ನೀಡಬೇಕಾಗಿರುವುದು ತಪ್ಪು ತೀರ್ಪು ನೀಡಿದ್ದ ಅಂಪೈರ್‌ಗೆ" ಎಂದು ಕಿಡಿಕಾರಿದ್ದಾರೆ.
ಆಗಿದ್ದೇನು?: ಪಂಜಾಬ್ ಇಂನ್ನಿಂಗ್ಸ್ ನ 18.3ನೇ ಎಸೆತವನ್ನು ಮಯಾಂಕ್ ಅಗರ್ವಾಲ್ ಕವರ್ ಏರಿಯಾಗೆ ಬಾರಿಸಿ ಎರಡು ರನ್ ಓಡಿದರು. ಆದರೆ ಮತ್ತೊಂದೆಡೆ ಇದ್ದ ಕ್ರಿಸ್ ಜೋರ್ಡಾನ್ ಎರಡನೇ ರನ್ ಓಡುವಾಗ ಕ್ರೀಸ್ ಮುಟ್ಟಿಲ್ಲ ಎಂದು ಅಂಪಾಯರ್ ಒಂದು ರನ್ ಕಡಿತಗೊಳಿಸಿದರು. ಎರಡು ರನ್ ಓಡಿದರೂ ತಂಡಕ್ಕೆ ಒಂದೇ ರನ್ ನೀಡಲಾಯಿತು. ಈ ಒಂದು ರನ್ ಅಂತಿಮವಾಗಿ ತಂಡಕ್ಕೆ ಮುಳುವಾಯಿತು. ಪರಿಣಾಮ ಪಂದ್ಯ ಟೈ ಆಯಿತು. ಸೂಪರ್ ಓವರ್ ನಲ್ಲಿ ರಾಹುಲ್ ಪಡೆ ಸೋಲನುಭವಿಸಿತು.
PublicNext
21/09/2020 05:53 pm