ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ಎರಡನೇ ದಿನದ ಟೆಸ್ಟ್ ಪಂದ್ಯದ ವೇಳೆ ನಾಲ್ವರು ಅತಿರೇಕದ ಅಭಿಮಾನ ತೋರಿಸಿ ಜೈಲು ಪಾಲಾಗಿದ್ದಾರೆ.
ನಿನ್ನೆ ರಾತ್ರಿ ಪಂದ್ಯದ ವೇಳೆ ಏಕಾಏಕಿ ವಿರಾಟ್ ಕೊಹ್ಲಿ ಬಳಿ ನುಗ್ಗಿದ ಯುವಕರು, ಮೈದಾನದಲ್ಲಿ ಅವಾಂತರ ಸೃಷ್ಟಿಸಿದರು. 10.15 ರ ಸುಮಾರಿಗೆ ಲಾಸ್ಟ್ ಓವರ್ ಟೈಮ್‌ನಲ್ಲಿ ಈ ಘಟನೆ ನಡೆದಿದೆ. ಕಲಬುರಗಿಯ ಓರ್ವ ಯುವಕ ಹಾಗೂ ಬೆಂಗಳೂರಿನ ಮೂವರು ಯುವಕರು ಹುಚ್ಚು ಅಭಿಮಾನ ತೋರಿದ್ದಾರೆ.
ವಿರಾಟ್ ಕೊಹ್ಲಿ ಬಳಿ ಧಿಡೀರ್ ಎಂದು ಓಡಿ ಹೋಗಲು ಯತ್ನಿಸಿದ್ರು. ಈ ವೇಳೆ ಸೆಕ್ಯೂರಿಟಿ ಕೈಗೂ ಸಿಗದೇ ಅಭಿಮಾನಿಗಳು ಹುಚ್ಚಾಟ ತೋರಿದ್ದಾರೆ. ಕೊನೆಗೂ ವಿರಾಟ್ ಕೊಹ್ಲಿ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ರು. ಈ ಹಿನ್ನೆಲೆ ನಾಲ್ವರನ್ನ ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ರು.
ಕ್ರೀಡಾಂಗಣದ ಒಳಗೆ ನುಗ್ಗಿದ ಯುವಕರನ್ನ ಕೂಡಲೇ ವಶಕ್ಕೆ ಪಡೆದ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅತಿಕ್ರಮ ಪ್ರವೇಶ ಮತ್ತು ನಿಯಮ ಉಲ್ಲಂಘನೆ ಹಿನ್ನೆಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
PublicNext
14/03/2022 12:42 pm