ಪಾಟ್ನಾ: ಸದಾ ಒಂದಿಲ್ಲೊಂದು ವಿವಾದಗಳಲ್ಲೇ ಇರುವ ಬಿಹಾರ ಕ್ರಿಕೆಟ್ ಸಂಸ್ಥೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಕುಮಾರ್ ತಿವಾರಿ ವಿರುದ್ಧ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನದ ಗಂಭೀರ ಆರೋಪ ಕೇಳಿ ಬಂದಿದೆ.
ರಾಕೇಶ್ ಕುಮಾರ್ ತಿವಾರಿ ವಿರುದ್ಧ ಗಂಭೀರ ಆರೋಪ ಮಾಡಿರುವ ಯುವತಿಯು ಗುರುಗ್ರಾಮ್ ನಿವಾಸಿಯಾಗಿದ್ದು, ಜಾಹೀರಾತು ಕಂಪನಿಯೊಂದರಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಾಳೆ. ಕಳೆದ ವರ್ಷ ಜಾಹೀರಾತು ಬಾಕಿ ಹಣ ಪಾವತಿಗಾಗಿ ರಾಕೇಶ್ ಅವರನ್ನು ಭೇಟಿಯಾಗಲು ದೆಹಲಿಯ ಪಂಚತಾರಾ ಹೋಟೆಲ್‌ಗೆ ಹೋಗಿದ್ದೆ. ಈ ವೇಳೆ ರಾಕೇಶ್ ಕುಮಾರ್ ತಿವಾರಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಆಕೆ ದೂರು ನೀಡಿದ್ದಾಳೆ.
ಯುವತಿಯ ದೂರಿನ ಮೇರೆಗೆ ನವದೆಹಲಿಯ ಸಂಸದ್ ಮಾರ್ಗ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವದೆಹಲಿ ಜಿಲ್ಲಾ ಡಿಸಿಪಿ ಕೂಡ ಇದನ್ನು ಖಚಿತಪಡಿಸಿದ್ದಾರೆ. ಡಿಸಿಪಿ ಪ್ರಕಾರ, ಈ ಪ್ರಕರಣವನ್ನು ಮಾರ್ಚ್ 7ರಂದು ದಾಖಲಿಸಲಾಗಿದೆ. ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ಸಹ ರಚಿಸಲಾಗಿದ್ದು, ಇದು ಸಂಪೂರ್ಣ ತನಿಖೆ ನಡೆಸುತ್ತಿದೆ.
PublicNext
09/03/2022 02:17 pm