ನಟಿ ತಾಪ್ಸಿ ಪನ್ನು ಅಭಿನಯದ 'ಶಭಾಶ್ ಮಿಥು' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಈ ಸಿನಿಮಾ ಲೆಜೆಂಡರಿ ಕ್ರಿಕೆಟರ್ ಮಿಥಾಲಿ ರಾಜ್ ಅವರ ಜೀವನವನ್ನು ಆಧರಿಸಿ ಮಾಡಲಾಗಿದ್ದು, ಸದ್ಯದಲ್ಲಿಯೇ ಬಿಡುಗಡೆಗೆ ಸಜ್ಜಾಗಿದೆ.
ಬಿಸಿಸಿಐ ಅಧ್ಯಕ್ಷ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು 'ಶಭಾಶ್ ಮಿಥು' ಸಿನಿಮಾದ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಎರಡು ನಿಮಿಷಗಳ ಟ್ರೈಲರ್ ಮಿಥಾಲಿಯ ಬಾಲ್ಯದ ಕಥೆಯೊಂದಿಗೆ ಪ್ರಾರಂಭವಾಗುತ್ತದೆ. ಇದು ನಂತರ ಅವರು ಹೇಗೆ ಆಡಲು ಪ್ರಾರಂಭಿಸಿದರು, ಅವರ ಅಭ್ಯಾಸ ಹೇಗಿತ್ತು?, ಅವರಿಗೆ ಈ ಸಮಯದಲ್ಲಿ ಬಂದ ಕಷ್ಟಗಳು ಎಷ್ಟು. ತಂಡದ ನಾಯಕಿಯಾಗಿದ್ದು ಹೇಗೆ? ಹೀಗೆ ಎಲ್ಲಾ ರೀತಿಯಲ್ಲಿ ಕ್ರಿಕೆಟ್ ಆಟದಲ್ಲಿ ಮಹಿಳೆಯಾಗಿರುವುದರಿಂದ ಏನೆಲ್ಲಾ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬುದರ ಝಲಕ್ ಈ ಟ್ರೈಲರ್.
PublicNext
20/06/2022 03:17 pm