ಬೆಂಗಳೂರು:ಭಾರತಕ್ಕೆ ವಿಶ್ವ ಕಪ್ ತಂದುಕೊಟ್ಟ ನಾಯಕ ಕಪೀಲ್ ದೇವ ಜೀವನ ಮಹಾನ್ ಸಾಧನೆ ಈಗ ಬೆಳ್ಳಿ ಪರದೆ ಮೇಲೆ ಬರುತ್ತಿದೆ. ಇದರ ಪ್ರಮೋಷನ್ ಆಗಿಯೆ ಸಿನಿಮಾ ತಾರೆಯರು ಮತ್ತು ಕ್ರಿಕೆಟ್ ತಾರೆಯರೂ ಒಂದಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜರೇ ಆಗಮಿಸಿದ್ದರು. ಕಿಚ್ಚ ಸುದೀಪ್ ಕೂಡ ಇಲ್ಲಿ ವಿಶೇಷವಾಗಿಯೇ ಗಮನ ಸೆಳೆದರು.
ಹೌದು ಕಪೀಲ್ ದೇವ ಕ್ರಿಕೆಟ್ ಜೀವನ ಆಧರಿಸಿದ 83 ಚಿತ್ರದಲ್ಲಿ ಹತ್ತು ಹಲವು ವಿಶೇಷತೆಗಳಿವೆ.ಇದರ ಪ್ರಮೋಷನ್ ಈಗಾಗಲೇ ಶುರು ಆಗಿದೆ. ಕ್ರಿಕೆಟ್ ಜಗತ್ತಿನ ದಿಗ್ಗಜರಾದ ಸಯ್ಯದ್ ಕೀರ್ಮಾನಿ,ಕೃಷ್ಣಮಾಚರಿ ಶ್ರೀಕಾಂತ್,ಕಪೀಲ್ ದೇವ, ಎಲ್ಲರೂ ಇಲ್ಲಿಗೆ ಆಗಮಿಸಿದ್ದರು. ಇವರ ಮಧ್ಯೆ ಕನ್ನಡದ ಕಿಚ್ಚ ಕೂಡ ಇದ್ದರು.
ವಿಶೇಷ ಅಂದ್ರೆ ಕಿಚ್ಚ ಸುದೀಪ್ ಕ್ರಿಕೆಟ್ ದಿಗ್ಗಜ ಸಯ್ಯದ್ ಕೀರ್ಮಾನಿ ಕಾಲಿಗೆ ನಮಸ್ಕರಿಯೇ ಈ ವಿಶೇಷ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟರು.ಹೀಗೆ ವಿಶೇಷವಾಗಿಯೇ ಆರಂಭವಾದ ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸಯ್ಯದ್ ಕೀರ್ಮಾನಿ,ಕೃಷ್ಣಮಾಚರಿ ಶ್ರೀಕಾಂತ್,ಕಪೀಲ್ ದೇವ ಎಲ್ಲರೂ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಡೈಲಾಗ್ ಹೇಳೋಕೆ ಟ್ರೈ ಮಾಡಿದರು.
ಚಿತ್ರದ ನಾಯಕ ನಟ ರಣವೀರ್ ಸಿಂಗ್ ಕೂಡ ಕನ್ನಡದಲ್ಲಿ ಡೈಲಾಗ್ ಹೇಳೊಕೆ ಪ್ರಯತ್ನಿಸಿದರು.ಡೈರೆಕ್ಟರ್ ಕಬೀರ್ ಖಾನ್ ಕೂಡ ಈ ಸಮಯದಲ್ಲಿ ಹಾಜರಿದ್ದರು. ಕ್ರಿಕೆಟ್ ಮತ್ತು ಸಿನಿಮಾ ತಾರೆಯರೆಲ್ಲ ಈ ವಿಶೇಷ ಕಾರ್ಯಕ್ರಮದಲ್ಲಿ ಕಂಗೊಳಿಸಿದರು. ಡಿಸೆಂಬರ್-24 ರಂದು ಈ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ. ದೀಪಿಕಾ ಪಡಕೋಣೆ ಇಲ್ಲಿ ಕಪೀಲ್ ದೇವ್ ಪತ್ನಿ ರೋಮಿ ಭಾಟಿಯಾ ರೋಲ್ ಅನ್ನೇ ನಿಭಾಯಿಸುತ್ತಿದ್ದಾರೆ.
PublicNext
19/12/2021 11:07 am