ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಿಮಗೆ ಏನೂ ಆಗಿಲ್ಲ ತಾನೆ': ವಾರ್ನರ್‌ ಕಾಲೆಳೆದ ಕೊಹ್ಲಿ

ನವದೆಹಲಿ: ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುವ ಅವರು ಈ ಬಾರಿ ತೆಲಗು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಅವತಾರ ತಾಳಿದ್ದಾರೆ.

'ಪುಷ್ಪ' ಸಿನಿಮಾದ 'ಅರೇ ಎ ಬಿಡ್ಡ ಇದಿ ನಾ ಅಡ್ಡ' ಹಾಡಿನಲ್ಲಿ ಅಲ್ಲು ಮುಖಕ್ಕೆ ತಮ್ಮ ಮುಖ ಸೇರಿಸಿದ್ದಾರೆ. ಈ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗುತ್ತಿದ್ದಂತೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

'ಸಂಗಾತಿ ನೀನು ಚೆನ್ನಾಗಿದ್ದೀಯಾ ತಾನೆ?' ಎಂದು ವಿರಾಟ್ ಕೊಹ್ಲಿ ಅವರು ವಾರ್ನರ್‌ಗೆ ಕಿಚಾಯಿಸಿದ್ದಾರೆ. ಈ ಮೂಲಕ ಏನೂ ಪ್ರಾಬ್ಲಂ ಇಲ್ಲ ತಾನೆ, ಮತ್ತೇಗೆ ಇಂತಹ ಅವತಾರ ಎಂದು ಕೊಹ್ಲಿ ವಾರ್ನರ್ ಅವರ ಕಾಲೆಳೆದಿದ್ದಾರೆ. ಇನ್ನು ಇದೇ ವಿಡಿಯೋಗೆ ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಜಾನ್ಸನ್ ಕೂಡ ಪ್ರತಿಕ್ರಿಯಿಸಿದ್ದು, ಒಂದ್ಸಲ ನಿಲ್ಲಿಸಪ್ಪಾ ಎಂಬಾರ್ಥದಲ್ಲಿ ಕಮೆಂಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

11/12/2021 10:55 pm

Cinque Terre

54.87 K

Cinque Terre

4

ಸಂಬಂಧಿತ ಸುದ್ದಿ