ಬೆಂಗಳೂರು:ಅಪ್ಪುಗೆ ಸೈಕಲ್ ಅಂದ್ರೆ ತುಂಬಾ ಇಷ್ಟ. ಆತ ನನ್ನ ಜನ್ಮ ದಿನಕ್ಕೆ ಸೈಕಲ್ ಗಿಫ್ಟ್ ಮಾಡಿದ್ದ.ಅವನು ಇದಿದ್ದರೇ ಇವತ್ತಿನ 50 ಕಿಮೀ ಸೈಕಲ್ ಜಾಥಾದಲ್ಲಿ ಭಾಗವಹಿಸುತ್ತಿದ್ದ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮನನ್ನ ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ಕೆ.ಎಸ್.ಆರ್.ಪಿ ಜಂಟಿಯಾಗಿ ಈ ಸೈಕಲ್ ಜಾಥಾ ಆಯೋಜಿಸಿತ್ತು.ಕಂಠೀರವ ಸ್ಟೇಡಿಯಂ ನಿಂದ ಶುರುವಾದ ಸೈಕಲ್ ಜಾಥಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ಕೊಟ್ಟರು.
ಅಪ್ಪು ಇದಿದ್ದರೆ ಈ ಸೈಕಲ್ ಜಾಥಾದಲ್ಲಿ ಭಾಗವಹಿಸುತ್ತಿದ್ದ.ಈಗ ಅವನಿಲ್ಲ. ಆದರೆ ಎಲ್ಲೂ ಹೋಗಿಲ್ಲ.ಇಲ್ಲೇ ಇದ್ದಾನೆ ಇರ್ತಾನೆ.ನಾನು ಅಪ್ಪುಗೆ ಅಣ್ಣನಲ್ಲ. ಅವ್ನೇ ನನಗೆ ಅಣ್ಣನಾಗಿ ಹೋಗಿದ್ದಾನೆ ಎಂದು ಶಿವರಾಜ್ ಕುಮಾರ್ ಹೇಳಿಕೊಂಡು ಅಪ್ಪುನನ್ನ ನೆನಪಿಸಿಕೊಂಡಿದ್ದಾರೆ.
PublicNext
21/11/2021 04:12 pm