ದುಬೈ:ಇಂಡಿಯನ್ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ನಡುವಿನ ಪ್ರೀತಿ ಮತ್ತೆಮತ್ತೆ ಬಹಿರಂಗೊಳ್ಳುತ್ತಿದೆ. ನಿನ್ನೆ ದುಬೈನಲ್ಲಿ ನಡೆದ ಇಂಡಿಯಾ ಮತ್ತು ಸ್ಕಾಟ್ಲೆಂಡ್ ತಂಡದ ಪಂದ್ಯ ವೀಕ್ಷಿಸಲು ದುಬೈಗೆ ಬಂದಿದ್ದ ಅಥಿಯಾ ಶೆಟ್ಟಿ,ಕೆ.ಎಲ್.ರಾಹುಲ್ ಸ್ಪೋಟಕ ಆಟ ಕಂಡು ಥ್ರಿಲ್ ಆಗಿದ್ದರು. ಕ್ರಿಕೆಟ್ ಕವರೇಜ್ ಕ್ಯಾಮೆರಾಗಳಲ್ಲಿ ಒಂದು ರಾಹುಲ್ ಬ್ಯಾಟಿಂಗ್ ಮುಗಿಯೋವರೆಗೂ ಅಥಿಯಾ ಶೆಟ್ಟಿ ಮೇಲೆನೇ ಇತ್ತು. ಆದ್ದರಿಂದಲೇ ಅಥಿಯಾ ಪ್ರತಿ ಮೂಮೆಂಟ್ ಎಲ್ಲರಿಗೂ ಗೊತ್ತಾಗಿದೆ.
ಕೆ.ಎಲ್.ರಾಹುಲ್ ಗೆಳತಿ ಅಥಿಯಾ ಶೆಟ್ಟಿಗೆ ನಿನ್ನೆ ಜನ್ಮ ದಿನ. ಇದೇ ಖುಷಿಯಲ್ಲಿಯೇ ಏನೋ. ಕೆ.ಎಲ್.ರಾಹುಲ್ ಕೇವಲ 18 ಬಾಲ್ ಗಳಲ್ಲಿ 50 ರನ್ ಚೆಚ್ಚಿ,ಗೆಳತಿ ಅಥಿಯಾಗೆ ಹಾಫ್ ಸೆಂಚ್ಯೂರಿಯ ಗಿಫ್ಟ್ ಕೊಟ್ಟಿದ್ದಾರೆನೋ ಅನ್ನೋ ಥರವೇ ಅಲ್ಲಿ ಇತ್ತು ಸಿಚ್ಯೂವೇಷನ್.ಯಾಕೆಂದ್ರೆ, ಅಥಿಯಾ ಶೆಟ್ಟಿ, ಕೆ.ಎಲ್.ರಾಹುಲ್ ಹೊಡೆದ ಸಿಕ್ಸ್ ಮತ್ತು ಫೋರ್ ಗಳನ್ನ ಅಷ್ಟೇ ಪ್ರೀತಿಯಿಂದಲೇ ವೀಕ್ಷಿಸಿ ಅದನ್ನ ತಮ್ಮದೇ ರೀತಿಯಲ್ಲಿ ವ್ಯಕ್ತಿಪಡಿಸುತ್ತಿದ್ದರು.
ಗೆಳೆತಿ ಅಥಿಯಾ ಶೆಟ್ಟಿ ಸ್ಟೇಡಿಯಂ ನಲ್ಲಿದ್ದಾಳೆ ಅಂದ್ಮೇಲೆ ರಾಹುಲ್ ಆಟದಲ್ಲಿ ಎನರ್ಜಿ ಇದ್ದೇ ಇರುತ್ತೆ. ಅದೇ ಉತ್ಸಾಹದಲ್ಲಿಯೇ ಅತಿ ವೇಗದಲ್ಲಿಯೇ ಕೆ.ಎಲ್.ರಾಹುಲ್ ಅರ್ಧಶತಕ ಬಾರಿಸಿ, ಎಲ್ಲರ ಮೆಚ್ಚುಗೆನೂ ಪಾತ್ರರಾಗಿದ್ದಾರೆ. ಗೆಳತಿ ಅಥಿಯಾ ಈ ಮೂಲಕ ಗಿಫ್ಟ್ ಕೊಟ್ಟಿದ್ದಾರೆ ಅನ್ನೋ ಮಾತುಗಳೂ ಹೆಚ್ಚು ಈಗ ಕೇಳಿ ಬರುತ್ತಿದೆ.
PublicNext
06/11/2021 02:46 pm