ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2020: ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ ಕ್ರಿಕೆಟಿಗರು ಯಾರು ಗೊತ್ತಾ?

ನವದೆಹಲಿ: 2020ರಲ್ಲಿ ಟೀಂ ಇಂಡಿಯಾದ ಅನೇಕ ಮಾಜಿ ಹಾಗೂ ಹಾಲಿ ಆಟಗಾರರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಕ್ರಿಕೆಟಿಗ ಅಜಿಂಕ್ಯ ರಹಾನೆ ಅಗ್ರಿಟೆಕ್ ಸ್ಟಾರ್ಟ್ಅಪ್ ಮೆರಾಕಿಸಾನ್, ಗೌತಮ್ ಗಂಭೀರ್ ಎಫ್‌ವೈಐ ಆರೋಗ್ಯವನ್ನು ಬೆಂಬಲಿಸಿದರೆ, ಕಪಿಲ್ ದೇವ್ ಈ ವರ್ಷ ಡೀಪ್ಟೆಕ್ ಸ್ಟಾರ್ಟ್ಅಪ್ ಹಾರ್ಮೋನೈಜರ್ ಇಂಡಿಯಾದಲ್ಲಿ ಹೂಡಿಕೆ ಮಾಡಿದ್ದಾರೆ. ಎಂ.ಎಸ್.ಧೋನಿ ಖಟಬೂಕ್‌ನಲ್ಲಿ ಹೂಡಿಕೆ ಮಾಡಿದರೆ, ಆರ್.ಪಿ.ಸಿಂಗ್ ಸ್ಪೋರ್ಟ್ಸ್ ಯುನೊದಲ್ಲಿ ಹೂಡಿಕೆ ಮಾಡಿದ್ದಾರೆ.

ಶಿಖರ್ ಧವನ್ ವೆಲ್ನೆಸ್ ಸ್ಟಾರ್ಟ್ಅಪ್ ಸರ್ವಾವನ್ನು ಬೆಂಬಲಿಸಿದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಡ್ಟೆಕ್ ಸ್ಟಾರ್ಟ್ಅಪ್ ಕ್ಲಾಸ್‌ಪ್ಲಸ್ ಬೆಂಬಲಿಸಿದರೆ, ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ಡಿಜಿಟ್ ಇನ್ಶುರೆನ್ಸ್ ಮತ್ತು ಫ್ಯಾಶನ್ ಸ್ಟಾರ್ಟ್ಅಪ್ ಯುಎಸ್‌ಪಿಎಲ್ ಅನ್ನು ಬೆಂಬಲಿಸಿದ್ದಾರೆ.

Edited By : Vijay Kumar
PublicNext

PublicNext

25/12/2020 08:05 am

Cinque Terre

59.62 K

Cinque Terre

1

ಸಂಬಂಧಿತ ಸುದ್ದಿ