ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಮಗು ಹಾಗೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.
ಇದೀಗ ಅನಿಷ್ಕಾ ಶರ್ಮಾ ಅವರು ಯೋಗಾಸನ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಶಿರ್ಶಾಸನ ಮಾಡುತ್ತಿವ ಪತ್ನಿ ಅನುಷ್ಕಾ ಅವರಿಗೆ ವಿರಾಟ್ ಸಪೋರ್ಟ್ ಮಾಡಿದ್ದನ್ನು ಫೋಟೋದಲ್ಲಿ ಕಾಣಬಹುದಾಗಿದೆ.
ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಪೋಸ್ಟ್ ಮಾಡಿ, ‘ಯೋಗವು ನನ್ನ ಜೀವನದ ಒಂದು ಭಾಗವಾಗಿದೆ. ನಾನು ಗರ್ಭಿಣಿಯಾಗುವುದಕ್ಕಿಂತ ಮೊದಲು ಒಂದಷ್ಟು ಆಸನಗಳನ್ನು ಹೊರತುಪಡಿಸಿ ಎಲ್ಲಾ ಆಸನಗಳನ್ನು ಮಾಡಬಹುದೆಂದು ನನ್ನ ವೈದ್ಯರು ತಿಳಿಸಿದ್ದರು. ಅದೇ ರೀತಿ ನಾನು ಅನೇಕ ವರ್ಷಗಳಿಂದ ಮಾಡುತ್ತಿರುವ ಶಿರ್ಶಾಸನವನ್ನು ಈ ಸಲ ಗೋಡೆಯನ್ನು ಬಳಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಹೀಗಾಗಿ ಈ ಫೋಟೋ ಕೆಲ ದಿನಗಳ ಹಿಂದೆಯೇ ಕ್ಲಿಕ್ಕಿಸಿದ್ದಾಗಿದೆ.
PublicNext
01/12/2020 02:27 pm