ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಮುಂದಿಟ್ಟು ಕೆಎಲ್ ಟ್ರೋಲ್

ಸಿಡ್ನಿ: ಭಾರತ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್‌ ಮಾಡಿ 19 ಎಸೆತಗಳಲ್ಲಿ 45 ರನ್ ಚಚ್ಚಿದ್ದರು. ಆದರೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಬ್ಯಾಟಿಂಗ್ ಪ್ರದರ್ಶನದಲ್ಲಿ ವೈಫಲ್ಯ ತೋರಿದರು. ಇದೇ ವಿಚಾರವಾಗಿ ಕೆ.ಎಲ್‌. ರಾಹುಲ್‌ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದಲ್ಲಿ ಬಹಳಷ್ಟು ಅವಕಾಶ ನೀಡಿದ್ದರೂ ಮ್ಯಾಕ್ಸ್‌ವೆಲ್ ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಹೀಗಾಗಿ ರಾಹುಲ್ ಅವರನ್ನು ಈಗ ಟ್ರೋಲ್ ಮಾಡಲಾಗುತ್ತಿದೆ.

ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ ಬಳಿಕ ರಾಹುಲ್ ಟ್ರೋಲ್‌ಗೀಡಾಗಿದ್ದ ಟ್ವೀಟ್‌ ಅನ್ನು ಮುಂದಿಟ್ಟು ಕಿಂಗ್ಸ್ ಘಿI ಪಂಜಾಬ್‌ ತಂಡದ ಮತ್ತೊಬ್ಬ ಬ್ಯಾಟ್ಸ್‌ಮನ್, ನ್ಯೂಜಿಲೆಂಡ್‌ನ ಜೇಮ್ಸ್ ನೀಶಮ್ ಕೂಡ ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗ್ಲೆನ್ ಮ್ಯಾಕ್ಸ್‌ವೆಲ್, 'ನಾನು ರಾಹುಲ್‌ಗೆ ಕ್ಷಮೆ ಕೇಳಿದ್ದೆ' ಎಂದು ಬರೆದುಕೊಂಡು ಕೊನೆಗೊಂದು ನಗುವ, ಸಿಂಹ, ಕೈಮುಗಿದ ಹಾಗೂ ಪ್ರೀತಿಯ ಇಮೋಜಿ ಸೇರಿಕೊಂಡಿದ್ದಾರೆ.

Edited By : Vijay Kumar
PublicNext

PublicNext

28/11/2020 02:53 pm

Cinque Terre

44.84 K

Cinque Terre

0