ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮೆಂಟರ್, ರಾಂಚಿ ಜಿಲ್ಲಾ ಕ್ರಿಕೆಟ್ ಅಧ್ಯಕ್ಷ ದೇವಲ್ ಸಹಯ್ (73) ಅವರು ಇಂದು ರಾಂಚಿಯಲ್ಲಿ ನಿಧನರಾಗಿದ್ದಾರೆ.
ದೇವಲ್ ಅವರು ಕಳೆದ ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಹುಬೇಕ ಚೇತರಿಸಿಕೊಂಡ ಅವರು ಅಕ್ಟೋಬರ್ 9ರಂದು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದರು. 10 ದಿನಗಳ ಹಿಂದೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಸದೆ ಇಂದು ಮೃತಪಟ್ಟಿದ್ದಾರೆ.
PublicNext
24/11/2020 02:49 pm