ನವದೆಹಲಿ : ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ತಂಡಗಳು ಭಾಗಿಯಾಗುತ್ತಿರುವ ಬಗ್ಗೆ ಐಸಿಸಿ ದೃಢಪಡಿಸಿದೆ.
ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಈ ಕ್ರೀಡಾಕೂಟದ ಅರ್ಹತಾ ಪ್ರಕ್ರಿಯೆಯನ್ನು ಘೋಷಿಸಿವೆ.
2022ರ ಜುಲೈ 28ರಿಂದ ಆ.8ರ ವರೆಗೆ ನಡೆಯಲಿರುವ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರೀಡಾಕೂಟವೂ ಸೇರ್ಪಡೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಮೊದಲು ಆರು ಶ್ರೇಯಾಂಕದಂತೆ ತಂಡಗಳು ಈ ಕೂಟಕ್ಕೆ ನೇರವಾಗಿ ಪ್ರವೇಶ ಪಡೆಯಲಿವೆ.
ಆತಿಥ್ಯ ವಹಿಸಲಿರುವ ಇಂಗ್ಲೆಂಡ್ ಗೂ ನೇರ ಪ್ರವೇಶದ ಅವಕಾಶವಿದೆ.
1998ಲ್ಲಿ ಕೌಲಾಲಂಪುರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುರುಷರ ತಂಡಗಳು ಭಾಗಿಯಾಗಿದ್ದವು.
ಅರ್ಹತೆ ಹೇಗೆ?
ಈ ಕೂಟದಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿವೆ.
2021ರ ಏಪ್ರಿಲ್ 1ರ Ranking ಮೊದಲ ಆರು ಶ್ರೇಯಾಂಕಿತ ತಂಡಗಳು ಈ ಕೂಟಕ್ಕೆ ನೇರ ಅರ್ಹತೆ ಪಡೆಯಲಿವೆ.
ಆತಿಥ್ಯ ವಹಿಸಲಿರುವ ಇಂಗ್ಲೆಂಡ್ ಗೆ ನೇರ ಪ್ರವೇಶ ಸಿಗಲಿದ್ದರೆ, ಮತ್ತೊಂದು ತಂಡ ಅರ್ಹತಾ ಸುತ್ತಿನಲ್ಲಿ ಆಡಿ ಕೂಟ ಪ್ರವೇಶಿಸಬೇಕು. ಇದು 2022ರ ಜನವರಿ 31ರ ಒಳಗೆ ನಡೆಯಲಿದೆ.
PublicNext
18/11/2020 10:11 pm