ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುಮಾರು 10 ಸಾವಿರ ಅಪೌಷ್ಟಿಕ ಮಕ್ಕಳ ನೆರವಿಗೆ ಮುಂದಾಗಿದ್ದಾರೆ.
ವಿರಾಟ್ ವೈಜ್ ಕಂಪನಿಯ ಹೆಲ್ತ್‌ಕೇರ್ ಹಾಗೂ ಸ್ಯಾನಿಟೈಸೇಶನ್ ಉತ್ಪನ್ನಗಳ ರಾಯಭಾರಿಯಾಗಿದ್ದು, ಇದರ ಸಂಪೂರ್ಣ ಲಾಭವನ್ನು ಅಪೌಷ್ಟಿಕ ಮಕ್ಕಳಿಗಾಗಿ ದಾನ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ರಾಹ್ ಫೌಂಡೇಶನ್ ಎಂಬ ಚಾರಿಟಿಯ ಸಹಾಯದಿಂದ ವಿರಾಟ್ ಕೊಹ್ಲಿ 10,000 ಅಪೌಷ್ಟಿಕ ಮಕ್ಕಳಿಗೆ ಸಹಾಯ ಮಾಡಲಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಕೊಹ್ಲಿ ''ಭಾರತದಲ್ಲಿನ ಅಪೌಷ್ಟಿಕತೆಯ ವಿರುದ್ಧ ಹೋರಾಟವನ್ನು ಮಾಡಲು ವೈಜ್‌ನಿಂದ ಬರುವ ಆದಾಯವನ್ನು ಬಳಸಿಕೊಳ್ಳಲು ಸಂತಸವಾಗುತ್ತಿದೆ. ಇದರೊಂದಿಗೆ ಈ ಹೋರಾಟದಲ್ಲಿ ಪಾಲುದಾರನಾಗಲು ಹೆಮ್ಮೆಯೆನಿಸುತ್ತಿದೆ'' ಎಂದು ತಿಳಿಸಿದ್ದಾರೆ.
PublicNext
18/11/2020 04:06 pm