ಢಾಕಾ: ಬಾಂಗ್ಲಾದೇಶ ಪರ ಅಂಡರ್ 19 ಕ್ರಿಕೆಟ್ ಆಡಿದ್ದ ಮಾಜಿ ಆಟಗಾರ ಮೊಹಮ್ಮದ್ ಸೊಜಿಬ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ದುರ್ಗ್ ಪುರ್ ನಿವಾಸಿಯಾಗಿದ್ದ ಸೊಜಿಬ್ ಗಿನ್ನೂ 21 ವರ್ಷ. ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ಸೊಜಿಬ್ ಮೂರು ಪ್ರಥಮ ದರ್ಜೆ ಪಂದ್ಯಗಳನಾಡಿದ್ದರು. 2017-18ರಲ್ಲಿ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಶಿನೇಪುಕರ್ ಕ್ರಿಕೆಟ್ ಕ್ಲಬ್ ಪರ ಆಡಿದ್ದರು.
ಸೊಜಿಬ್ ಆತ್ಮಹತ್ಯೆಗೆ ಸಂತಾಪ ವ್ಯಕ್ತಪಡಿಸಿದ ಬಾಂಗ್ಲಾದೇಶ ಕ್ರಿಕೆಟ್ ಕ್ಲಬ್ ನಿರ್ದೇಶಕ ಖಾಲಿದ್ ಮೊಹಮ್ಮದ್, ''ಸೊಜಿಬ್ ಪ್ರತಿಭಾವಂತ ಕ್ರಿಕೆಟರ್ ಆಗಿದ್ದರು. ಅವರ ನಿಧನದ ಬಗ್ಗೆ ಕೇಳಿ ತೀವ್ರ ಆಘಾತವಾಗಿದೆ. ಅವರು ಓಪನಿಂಗ್ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ವೇಗಿಯಾಗಿ ಶಿನೇಪುಕರ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದರು'' ಎಂದು ತಿಳಿಸಿದ್ದಾರೆ.
PublicNext
17/11/2020 01:18 pm