ಇಸ್ಲಾಮಾಬಾದ್: ಪಾಕಿಸ್ತಾನ ಸೂಪರ್ ಲೀಗ್ ಕ್ವಾಲಿಫೈಯರ್ ಪಂದ್ಯದ ವೇಳೆ ನಾಯಿಯೊಂದು ಎಂಟ್ರಿಕೊಟ್ಟ ಹಿನ್ನೆಲೆಯಲ್ಲಿ ಪಂದ್ಯವು ತಡವಾಗಿ ಪುನಾರಂಭಗೊಂಡ ಪ್ರಸಂಗ ಶನಿವಾರ ನಡೆದಿದೆ.
ಶನಿವಾರ ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಇನ್ನಿಂಗ್ಸ್‌ನ 13ನೇ ಓವರ್ ಮುಗಿದ ನಂತರ ನಾಯಿ ಮೈದಾನದಲ್ಲಿ ಕಾಣಿಸಿಕೊಂಡಿತು. ಈ ವೇಳೆ ಅದನ್ನು ಓಡಿಸಲು ಅಧಿಕಾರಿಯೊಬ್ಬರು ಬರುತ್ತಿದ್ದಂತೆ ನಾಯಿ ನೆಲದ ಮೇಲೆ ಕುಳಿತುಕೊಂಡಿತು. ಹೀಗಾಗಿ ಪಂದ್ಯವು ಕೆಲವು ನಿಮಿಷಗಳ ಕಾಲ ವಿಳಂಬಗೊಂಡು ನಾಯಿ ಮೈದಾನದಿಂದ ಹೊರಬಂದ ನಂತರ ಪುನರಾರಂಭವಾಯಿತು.
ಈ ಪ್ರಸಂಗದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೆ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
15/11/2020 04:08 pm