ದುಬೈ: ಐಪಿಎಲ್ 13ನೇ ಆವೃತ್ತಿಯ ಕ್ವಾಲಿಫೈಯರ್-2ನೇ ಪಂದ್ಯವು ಇಂದು ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಲಿವೆ.
ಅಬುಧಾಬಿಯಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್‌ನಲ್ಲಿ ಸೆಣಸಾಡಲಿದೆ. ಉಭಯ ತಂಡಗಳು ಫೈನಲ್ ಪ್ರವೇಶಿಸಲು ಭರ್ಜರಿ ಸಿದ್ಧತೆ ನಡೆಸಿವೆ. ಯುವ ಆಟಗಾರರೇ ಹೆಚ್ಚಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಆಟಗಾರರು ಹೆಚ್ಚಾಗಿರುವ ಆಟಗಾರ ವಿರುದ್ಧ ಗೆಲುವು ದಾಖಲಿಸಲು ಕಾತುರದಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಫೈನಲ್ ಏರುವ ತವಕದಲ್ಲಿರುವ ಡೆಲ್ಲಿಗೆ ಈ ಪಂದ್ಯ ಬಹುಮುಖ್ಯವಾಗಿದ್ದು, ತಪ್ಪುಗಳನ್ನು ಸರಿಪಡಿಸಿ ಕಣಕ್ಕಿಳಿಯಬೇಕಿದೆ. ಓಪನರ್ ಆಗಿ ಧವನ್ ಜೊತೆ ಮಾರ್ಕಸ್ ಸ್ಟಾಯಿನಿಸ್ ಕಣಕ್ಕಿಳಿಯುವ ಅಂದಾಜಿದೆ. ಜೊತೆಗೆ ಬ್ಯಾಟಿಂಗ್ ಬಲ ಹೆಚ್ಚಿಸಲು ಶಿಮ್ರೋನ್ ಹೆಟ್ಮೇರ್ ಆಡಬಹುದು.
PublicNext
08/11/2020 04:35 pm