ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಔಟ್ ಆಗುತ್ತಲೇ ಕಂಗಾಲಾದ ಗೇಲ್ :ಮೈದಾನದಲ್ಲೇ ಬ್ಯಾಟ್ ಎಸೆದು ಹುಚ್ಚಾಟ

ಅಬುಧಾಬಿ: ಕ್ರಿಕೆಟ್ ದುನಿಯಾದಲ್ಲಿ ಐಪಿಎಲ್ ತನ್ನದೇ ಆದ ಒಂದು ಗತ್ತು ಹೊಂದಿದೆ.

ಸದ್ಯ ಐಪಿಎಲ್ 2020 ಹಂಗಾಮ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳು ಕೊನಾರಾ ಮಧ್ಯೆಯೂ ಕ್ರಿಕೆಟ್ ಸಂಭ್ರಮವನ್ನು ಆನಂದಿಸುತ್ತಿದ್ದಾರೆ.

ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕೇವಲ 63 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.

6 ಫೋರ್ಸ್, 8 ಸಿಕ್ಸರ್ ಒಳಗೊಂಡ 99 ರನ್ ಬಾರಿಸಿ ಶತಕದ ಸಮೀಪದಲ್ಲಿದ್ದ ಗೇಲ್, 19.4ನೇ ಓವರ್ ನಲ್ಲಿ ಜೋಫ್ರಾ ಆರ್ಚರ್ ಎಸೆತಕ್ಕೆ ಬೌಲ್ಡ್ ಆದರು.

ಶತಕದ ಸಮೀಪದಲ್ಲಿ ಔಟಾಗಿದ್ದಕ್ಕೆ ಹತಾಶೆಗೊಂಡ ಗೇಲ್, ಬ್ಯಾಟನ್ನು ನೆಲಕ್ಕೆ ಬಡಿದು ಬೇಸರ ವ್ಯಕ್ತಪಡಿಸಿದ್ದರು.

ಐಪಿಎಲ್ ಇತಿಹಾಸದಲ್ಲೇ ಇಂತಹ ಅಸಭ್ಯ ತೋರಿದ್ದು, ಗೇಲ್ ಇದೇ ಮೊದಲು ಎನ್ನಲಾಗಿದೆ.

ಮೈದಾನದಲ್ಲಿ ಹುಚ್ಚಾಟ ನಡೆಸಿದ್ದರಿಂದ ಗೇಯ್ಲ್ ಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡ 10ರಷ್ಟು ದಂಡ ವಿಧಿಸಲಾಗಿದೆ.

ಐಪಿಎಲ್ ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ಅನ್ನು ಕ್ರಿಸ್ ಗೇಯ್ಲ್ ಒಪ್ಪಿಕೊಂಡಿದ್ದರು.

ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇ ಆಫ್ ರೇಸ್ ನಲ್ಲಿದೆ.

Edited By : Nirmala Aralikatti
PublicNext

PublicNext

31/10/2020 03:22 pm

Cinque Terre

48.09 K

Cinque Terre

0

ಸಂಬಂಧಿತ ಸುದ್ದಿ