ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ ಗಳಿಂದ ಗೆದ್ದ ಕೋಲ್ಕತ್ತಾ

ಅಬುಧಾಬಿ : ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಗ್ಗರಿಸಿದೆ.

ಕೊಲ್ಕತ್ತಾ ನೀಡಿದ 195 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿಲಷ್ಟೇ ಶಕ್ತವಾಯಿತು.

ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿಸಿದ ಅಜಿಂಕ್ಯಾ ರಹಾನೆ ಮತ್ತು ಶಿಖರ್ ಧವನ್ ಒಂದಂಕಿ ದಾಟುವ ಮೊದಲೇ ಪೆವಿಲಿಯನ್ ಸೇರಿದರು.

ರಹಾನೆ, ಪ್ಯಾಟ್ ಕಮಿನ್ಸ್ ಎಸೆದ ಮೊದಲ ಬಾಲ್ ನಲ್ಲೆ ಎಲ್ ಬಿ ಬಲೆಗೆ ಬಿದ್ದು ಶೂನ್ಯಕ್ಕೆ ನಿರ್ಗಮಿಸಿದರು.

ಧವನ್ ಕೂಡ 6ರನ್ ಗಳಿಸಿದ್ದಾಗ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಡೆಲ್ಲಿ ತಂಡಕ್ಕೆ ಅಲ್ಪ ರನ್ ಕಾಣಿಕೆ ನೀಡಿದರು.

38 ಎಸೆತಗಳನ್ನು ಎದುರಿಸಿದ ಅಯ್ಯರ್ 47 ರನ್ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ ನಲ್ಲಿ ನಾಗರ್ ಕೋಟಿಗೆ ಕ್ಯಾಚ್ ನೀಡಿದರು.

2 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ ಉತ್ತಮವಾಗಿ ಆಡುತ್ತಿದ್ದ ಪಂತ್ ಕೂಡ ಚಕ್ರವರ್ತಿ ಬೌಲಿಂಗ್ ನಲ್ಲಿ ಶುಭ್ ಮನ್ ಗಿಲ್ ಗೆ ಕ್ಯಾಚ್ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ (10) ಹಾಗೂ ರವಿಚಂದ್ರನ್ ಅಶ್ವಿನ್(14) ಹೊರತುಪಡಿಸಿದರೆ ಉಳಿದವರಾರು ಒಂದಂಕಿ ದಾಟಲಿಲ್ಲ.

ಮಾರ್ಕಸ್ ಸ್ಟೋಯ್ನಿಸ್ 6, ಅಕ್ಷರ್ ಪಟೇಲ್ 9, ಕಗಿಸೋ ರಬಾಡ 9, ತುಷಾರ್ ದೇಶ್ ಪಾಂಡೆ 1 ರನ್ ಗಳಿಸಲಷ್ಟೇ ಶಕ್ತರಾದರು.

ಅಂತಿಮವಾಗಿ ಡೆಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ 59 ರನ್ ಗಳ ಭಾರೀ ಅಂತರದಿಂದ ಸೋಲೋಪ್ಪಿಕೊಂಡಿತು.

Edited By : Nirmala Aralikatti
PublicNext

PublicNext

24/10/2020 07:30 pm

Cinque Terre

59.21 K

Cinque Terre

1

ಸಂಬಂಧಿತ ಸುದ್ದಿ