ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೀಷ್, ವಿಜಯ್ ಶಂಕರ್ ಅಬ್ಬರ- ಆರ್‌ಆರ್‌ ವಿರುದ್ಧ ಹೈದರಾಬಾದ್‌ಗೆ 8 ವಿಕೆಟ್‌ಗಳಿಂದ ಗೆಲುವು

ದುಬೈ: ಮನೀಷ್ ಪಾಂಡೆ ಹಾಗೂ ವಿಜಯ್ ಶಂಕರ್ ಅದ್ಬುತ ಜೊತೆಯಾಟದಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್‌ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 13ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 154 ರನ್‌ಗಳನ್ನು ಗಳಿಸಿತ್ತು. ಆರ್‌ಆರ್‌ ನೀಡಿದ್ದ ಗುರಿ ಬೆನ್ನಟ್ಟಿದ ಹೈದರಾಬಾದ್‌ ತಂಡವು 18.1 ಓವರಿನಲ್ಲಿ 2 ವಿಕೆಟ್‌ ನಷ್ಟಕ್ಕೆ 156 ರನ್‌ ಗಳಿಸಿ ಗೆಲುವು ದಾಖಲಿಸಿದೆ.

ಹೈದರಾಬಾದ್‌ ಮನೀಷ್ ಪಾಂಡೆ ಅಜೇಯ 83 ರನ್ (47 ಎಸೆತ, 4 ಬೌಂಡರಿ, 8 ಸಿಕ್ಸರ್), ವಿಜಯ್ ಶಂಕರ್ ಅಜೇಯ 52 ರನ್ (51 ಎಸೆತ, 6 ಬೌಂಡರಿ), ನಾಯಕ ಪರ ಡೇವಿಡ್ ವಾರ್ನರ್ (4 ರನ್) ಹಾಗೂ ಜಾನಿ ಬೇರ್‌ಸ್ಟೋ (10 ರನ್‌) ಗಳಿಸಿದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದಿದ್ದ ರಾಜಸ್ಥಾನ್​ ತಂಡವು 6 ವಿಕೆಟ್‌ ನಷ್ಟಕ್ಕೆ 154 ರನ್‌ಗಳನ್ನು ಗಳಿಸಿತ್ತು.

Edited By : Vijay Kumar
PublicNext

PublicNext

22/10/2020 11:05 pm

Cinque Terre

64.46 K

Cinque Terre

9