ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ದಾಖಲೆ ಬರೆದ ಮಾಂತ್ರಿಕ ಬೌಲರ್ ಸಿರಾಜ್

ಸಿಕ್ಕ ಟ್ರೋಲ್ ಪೇಜುಗಳಲ್ಲಿ ಟ್ರೋಲ್ ಆಗುತ್ತಿದ್ದ ಆ ಹುಡುಗ ಈಗ ಅದೇ ಟ್ರೋಲ್ ಪೇಜುಗಳಲ್ಲಿ ಹೀರೋ ಆಗಿದ್ದಾರೆ. ಅದೇ ಟ್ರೋಲ್ ಪೇಜುಗಳು ಅವರನ್ನು ಹೊಗಳಲಾರಂಭಿಸಿವೆ.

ಯೆಸ್. ನಾವು ಹೇಳುತ್ತಿರೋದು ಆರ್ ಸಿ ಬಿ ತಂಡದ ಮಾಂತ್ರಿಕ ಬೌಲರ್ ಮಹಮ್ಮದ್ ಸಿರಾಜ್ ಬಗ್ಗೆ. ಈಗ ಅವರು ಐಪಿಎಲ್ ಇತಿಹಾಸವೇ ಕಂಡಿರದ ಹೊಸ ದಾಖಲೆಯೊಂದನ್ನ ಮಾಡಿದ್ದಾರೆ.

ನಿನ್ನೆ ನಡೆದ ಕೆಕೆಆರ್ ಹಾಗೂ ಆರ್ ಸಿ ಬಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೌಲರ್ ಮಹಮ್ಮದ್ ಸಿರಾಜ್ ಅವರು ಎದುರಾಳಿ ತಂಡಕ್ಕೆ ದುಃಸ್ವಪ್ನವಾಗಿ ಕಾಡಿದರು.

ಪವರ್ ಪ್ಲೇನಲ್ಲಿ ಎರಡು ಮೇಡಿ‌ನ್ ಅವರ್ ಮಾಡಿದ ಸಿರಾಜ್ ಯಾವುದೇ ರನ್ ನೀಡದೇ ಮೂರು ವಿಕೆಟ್ ಕೆಡವಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ.

ವಿನೂತನ ದಾಖಲೆ ಮಾಡಿದ ಮಹಮ್ಮದ್ ಸಿರಾಜ್ ಹೈದರಬಾದ್ ಮೂಲದ ಬಡ ಕುಟುಂಬದಲ್ಲಿ ಬೆಳೆದ ಸಾಮಾನ್ಯ ಹುಡುಗ. ಅವರ ತಂದೆ ಆಟೋ ಡ್ರೈವರ್. ತಾಯಿ ಅನಕ್ಷರಸ್ಥೆ‌. ಬದುಕಿನುದ್ದಕ್ಕೂ ಬಡತನ ಅಂಟಿಕೊಂಡೇ ಇತ್ತು.

ಇಂತಹ ಹಿಂದುಳಿದ ಕುಟುಂಬದಲ್ಲಿ ಬೆಳೆದ ಸಿರಾಜ್ ಈಗ ಇಡೀ ದೇಶದ ಕ್ರಿಕೆಟ್ ಪ್ರೇಮಿಗಳು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

22/10/2020 12:05 pm

Cinque Terre

85.94 K

Cinque Terre

16

ಸಂಬಂಧಿತ ಸುದ್ದಿ