ಅಬುಧಾಬಿ: ಕ್ವಿಂಟನ್ ಡಿಕಾಕ್ ಅಬ್ಬರದ ಬ್ಯಾಟಿಂಗ್ ಹಾಗೂ ರೋಹಿತ್ ಶರ್ಮಾ ತಾಳ್ಮೆಯ ಆಟದಿಂದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 32ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 148 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯ್ಸ್ ತಂಡವು 19 ಎಸೆತಗಳು ಬಾಕಿ ಇರುವಂತೆ ಎರಡು ವಿಕೆಟ್ ನಷ್ಟಕ್ಕೆ 149 ರನ್ ಚಚ್ಚಿ ಗೆದ್ದು ಬೀಗಿದೆ.
ಟಾರ್ಗೆಟ್ ಬೆನ್ನಟ್ಟಿರುವ ಮುಂಬೈ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಅಮೋಘ ಜೊತೆಯಾಟ ತಂಡಕ್ಕೆ ನೆರವಾಗಿದೆ. ಕೆಕೆಆರ್ ಬೌಲರ್ಗಳ ಬೆವರಿಳಿಸಿದ ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಡಿಕಾಕ್ ಆರ್ಭಟಿಸಿದರೆ, ರೋಹಿತ್ ಇವರಿಗೆ ಉತ್ತಮ ಸಾತ್ ನೀಡಿದರು.
ಈ ಜೋಡಿ 10 ಓವರ್ ಆಗುವ ಹೊತ್ತಿಗೆ 94 ರನ್ ಬಾರಿಸಿತು. ರೋಹಿತ್ ಶರ್ಮಾ 35 ರನ್ (36 ಎಸೆತ, 5 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟ್ ಆದರು. ಸೂರ್ಯಕುಮಾರ್ ಯಾದವ್(10 ರನ್) ಬೇಗನೆ ನಿರ್ಗಮಿಸಿದರು. ಅಜೇಯವಾಗಿ ಉಳಿದ ಡಿಕಾಕ್ 78 ರನ್ (44 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ ಅಜೇಯ 21 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸ್) ಗಳಿಸಿ ದಂಡಕ್ಕೆ ಗೆಲುವು ತಂದುಕೊಟ್ಟರು.
PublicNext
16/10/2020 10:55 pm