ಅಬುಧಾಬಿ: ಪ್ಯಾಟ್ ಕಮ್ಮಿನ್ಸ್ ಅರ್ಧಶತಕ, ಇಯಾನ್ ಮಾರ್ಗನ್ ತಾಳ್ಮೆಯ ಬ್ಯಾಟಿಂಗ್‌ನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್‌ಗೆ 149 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 32ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 5 ವಿಕೆಟ್ ನಷ್ಟಕ್ಕೆ 148 ರನ್‌ಗಳ ಗುರಿ ನೀಡಿದೆ. ಮುಂಬೈ ಇಂಡಿಯನ್ಸ್ ಪರ ರಾಹುಲ್ ಚಹರ್ 2 ವಿಕೆಟ್ ಪಡೆದು ಮಿಂಚಿದರೆ, ಟ್ರೆಂಟ್ ಬೌಲ್ಟ್, ನಥನ್ ಕಲ್ಟರ್ ನೈಲ್ ಹಾಗೂ ಜಸ್‌ಪ್ರೀತ್ ಬೂಮ್ರಾ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿರುವ ಕೆಕೆಆರ್ ಉತ್ತಮ ಆರಂಭ ಕಂಡುಕೊಳ್ಳುವಲ್ಲಿ ವಿಫಲವಾಯಿತು. ತಂಡದ ಮೊತ್ತ ಕೇವಲ 47 ರನ್ ವೇಳೆ ರಾಹುಲ್ ತ್ರಿಪಾಠಿ (7 ರನ್), ನಿತೀಶ್ ರಾಣ (5 ರನ್), ಶುಭ್‌ಮನ್ ಗಿಲ್ (21) ಹಾಗೂ ದಿನೇಶ್ ಕಾರ್ತಿಕ್ (4 ರನ್) ವಿಕೆಟ್ ಒಪ್ಪಿಸಿದರು.
ಈ ಬೆನ್ನಲ್ಲೇ ನಾಯಕ ಇಯಾನ್ ಮಾರ್ಗನ್‌ಗೆ ಸಾಥ್ ನೀಡಿದ್ದ ಆಂಡ್ರೆ ರಸೆಲ್ (12 ರನ್) ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಯಲ್ಲಿ ಪ್ಯಾಟ್ ಕಮ್ಮಿನ್ಸ್ 53 ರನ್ ಹಾಗೂ ಇಯಾನ್ ಮಾರ್ಗನ್ 39 ರನ್ ಚಚ್ಚಿ ದಂಡದ ಮೊತ್ತವನ್ನು 148 ರನ್‌ಗೆ ತಂದು ನಿಲ್ಲಿಸಿದರು.
PublicNext
16/10/2020 09:15 pm