ಅಬುಧಾಬಿ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನೂತನ ಸಾರಥಿ ಕೆ.ಎಲ್.ರಾಹುಲ್ ಕನ್ನಡಿಗ ಆಟಗಾರರೊಂದಿಗೆ ಹೆಚ್ಚಾಗಿ ಕನ್ನಡದಲ್ಲೇ ಮಾತನಾಡುತ್ತಾರೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಕನ್ನಡದಲ್ಲಿಯೇ ಮಾತನಾಡಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.
ಕೆ.ಎಲ್.ರಾಹುಲ್ ಫೀಲ್ಡಿಂಗ್ ವೇಳೆ ಕನ್ನಡದಲ್ಲಿ ‘ಮುಂದೆ ಬಾರೋ ಲವ್ಡೆ’ ಎಂದು ಅಸಭ್ಯ ಪದವನ್ನು ಬಳಸಿರುವುದು ಸ್ಟಂಪ್ ಮೈಕ್‍ನಲ್ಲಿ ಸೆರೆಯಾಗಿದೆ. ಆದರೆ ಅವರು ಯಾರನ್ನು ಉದ್ದೇಶಿಸಿ ಈ ಪದ ಬಳಕೆ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕರ್ನಾಟಕದ ಆಟಗಾರರಾದ ಕೆ.ಎಲ್.ರಾಹುಲ್ ಆತ್ಮೀಯ ಗೆಳೆಯ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಮತ್ತು ಕೃಷ್ಣಪ್ಪ ಗೌತಮ್ ನಿನ್ನೆಯ ಪಂದ್ಯದಲ್ಲಿದ್ದರು. ಆದರೆ ಈ ಪೈಕಿ ಯಾರನ್ನೋ ಉದ್ದೇಶಿಸಿ ರಾಹುಲ್ ಅಸಭ್ಯ ಪದ ಬಳಕೆ ಮಾಡಿರಬಹುದು ಎನ್ನಲಾಗಿದೆ. ರಾಹುಲ್ ಬೈಗುಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
21/09/2020 04:56 pm