ಅಬುಧಾಬಿ : ಸದ್ಯ ಕೊರೊನಾ ವಿಷಮ ಪರಿಸ್ಥಿತಿಯ ಮಧ್ಯೆ 2020 ಐಪಿಎಲ್ ರೋಚಕ ಪಂದ್ಯಗಳು ನಡೆಯುತ್ತಿದೆ.
ನಿನ್ನೆ ನಡೆದ MI vs RR ನಡುವಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೋಲನ್ನು ಕಂಡಿದೆ.
ಸದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಹೌದು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರಿಗೆ ಬರೋಬ್ಬರಿ 12 ಲಕ್ಷ ದಂಡ ವಿಧಿಸಲಾಗಿದೆ.
ಅಬುಧಾಬಿಯಲ್ಲಿ ಮಂಗಳವಾರ ನಡೆದ ಐಪಿಎಲ್-2020 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಿಧಾನಗತಿ ಬೌಲಿಂಗ್ ಮಾಡಿರುವುದು ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಿದೆ.
ಆ ಹಿನ್ನೆಲೆಯಲ್ಲಿ 12 ಲಕ್ಷ ದಂಡ ತೆರಬೇಕೆಂದು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರಿಗೆ ಐಪಿಎಲ್ ಆಡಳಿತವು ಆದೇಶಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪರಾಭವಗೊಂಡಿತು.
ಮುಂಬೈ ಇಂಡಿಯನ್ಸ್ನ 194 ರನ್ ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಕೇವಲ 136 ರನ್ ಗಳಿಗೆ ಆಲೌಟ್ ಆಯಿತು.
PublicNext
07/10/2020 08:18 am