ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಟಿಪ್ಪು ಎಕ್ಸ್‌ಪ್ರೆಸ್‌ ರೈಲು ಹೆಸರು ಬದಲಾವಣೆ - ಈಶ್ವರಪ್ಪರ ಒನ್ ಲೈನ್ ಉತ್ತರ

ಶಿವಮೊಗ್ಗ: ಭಾರತ್ ಜೋಡೋ ಯಾತ್ರೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.ರಾಜಕೀಯ ಪಕ್ಷವಾಗಿ ಟೀಕೆ ಮಾಡುವುದು ಸಹಜ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈ ಹಿಂದೆ ದೇಶ ಒಡೆದಿದ್ದೆ ಕಾಂಗ್ರೆಸ್ ನವರು ದೇಶವನ್ನು ತುಂಡು ಮಾಡಿದ ನೆಹರೂ ವಂಶದವರೇ ಈಗಿನವರೆಗೂ ಅವರ ಪಕ್ಷದ ಆಡಳಿತ ನಡೆಸುತ್ತಿದ್ದಾರೆ. ಈಗ ದೇಶದ ಜನರೇ ಕಾಂಗ್ರೆಸ್'ನ್ನು ವಿಸರ್ಜನೆ ಮಾಡುತ್ತಿದ್ದಾರೆ.ಮತ್ತೆ ನಮಗೆ ಜನರು ಬೆಂಬಲ ಕೊಡುತ್ತಾರೆಂಬ ಭ್ರಮೆಯಲ್ಲಿ ಕಾಂಗ್ರೆಸ್ ಹೊರಟಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಇಡೀ ದೇಶದಲ್ಲಿಯೇ ನೆಲ ಕಚ್ಚುತ್ತಿದೆ. ಆದರೂ, ಈ ಕಾಂಗ್ರೆಸಿಗರು ತಮ್ಮ ಬುದ್ಧಿಯನ್ನು ಬಿಡುತ್ತಿಲ್ಲ. ಇಡಿ ವಿಚಾರಣೆಗೆ ಕರೆದರೆ ಡಿ.ಕೆ. ಶಿವಕುಮಾರ್ ಅವರಂತಹವರು ನನಗೆ ಸಮಯವಿಲ್ಲ. ಪಾದಯಾತ್ರೆ ಇದೆ. ಸೆಷನ್ ಇದೆ ಎನ್ನುತ್ತಾರೆ. ಈ ನೆಲದ ಕಾನೂನಿಗೆ ಇಂತಹವರು ಹೇಗೆ ಗೌರವ ಕೊಡುತ್ತಾರೆ. ನ್ಯಾಯಾಲಯಗಳು ಇವರ ಸಮಯವನ್ನು ನೋಡಿ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಅವರು, ಟಿಪ್ಪು ಎಕ್ಸ್‌ಪ್ರೆಸ್‌ ರೈಲು ಹೆಸರು ಬದಲಾವಣೆ ಬಗ್ಗೆ ಸಿದ್ಧರಾಮಯ್ಯ ಕೆಂಡ ಕಾರಿದ್ದಕ್ಕೆ ಪ್ರತಿಕ್ರಿಯಿಸಿ, ಸರ್ದಾರ್ ವಲ್ಲಭಭಾಯಿ ಅವರ ರಕ್ತ ಹಂಚಿಕೊಂಡು ಹುಟ್ಟಿದ್ದು, ಮೋದಿ. ಜಿನ್ನಾ ರಕ್ತ ಹಂಚಿಕೊಂಡಿರುವುದು ಸಿದ್ಧರಾಮಯ್ಯ ಎಂದು ಒಂದೇ ವಾಕ್ಯದಲ್ಲಿ ಉತ್ತರಿಸಿದ್ದಾರೆ.

Edited By : Manjunath H D
PublicNext

PublicNext

08/10/2022 08:48 pm

Cinque Terre

40.72 K

Cinque Terre

23

ಸಂಬಂಧಿತ ಸುದ್ದಿ