ಶಿವಮೊಗ್ಗ: ಅಪ್ರತಿಮ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದಂದೇ ದೇಶದ್ರೋಹಿ ಪಿಎಫ್'ಐ ಸಂಘಟನೆಯನ್ನು ನಿಷೇಧಿಸಿರುವುದು ಸಂತಸ ಮೂಡಿಸಿದ್ದು, ಎಲ್ಲ ಸ್ವಾತಂತ್ರ ಹೋರಾಟಗಾರರ ಆತ್ಮಕ್ಕೆ ಇಂದು ಶಾಂತಿ ದೊರೆತಿರುತ್ತದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸ್ಕರ್ ಲಿಯೇ ಪಾಕಿಸ್ತಾನ್ ಲಡ್ತೆ ಹುವೇ ಲೇಂಗೆ ಹಿಂದೂಸ್ಥಾನ್ ಎಂಬ ಘೋಷಣೆ ಮಾಡಿಕೊಂಡು ಓಡಾಡುತ್ತಿದ್ದರು. ಇವರು ನಡೆಸಿರುವ ಕೃತ್ಯಗಳು ಒಂದೇ ಎರಡೇ... ಇಂತಹ ಸಂಘಟನೆಯನ್ನು ನಿಷೇಧಿಸಿರುವುದನ್ನು ಪಕ್ಷಬೇಧ ಮರೆತು ಸ್ವಾಗತಿಸಬೇಕು. ಬದಲಾಗಿ ಯಾರು ನಿಷೇಧ ಮಾಡಿದ್ದು ಎಂಬ ಪ್ರಶ್ನೆ ಉದ್ಬವವಾಗಬಾರದು ಎಂದರು.
ದೇಶ ವಿರೋಧಿ ಚಟುವಟಿಕೆ, ಉಗ್ರರ ಜೊತೆ ಸಂಬಂಧ, ಉಗ್ರ ಚಟುವಟಿಕೆಗಳಿಗೆ ಫಂಡ್ ಸಂಗ್ರಹ, ಯುವಕರಿಗೆ ಉಗ್ರ ಸಂಘಟನೆಗಳಿಗೆ ಸೇರಲು ಪ್ರೇರೆಪಣೆ ಸೇರಿದಂತೆ ಇಂತಹ ಕೃತ್ಯಗಳಿಗಾಗಿ ಈ ಸಂಘಟನೆಯನ್ನು ನಿಷೇಧ ಮಾಡಲಾಗಿದ್ದು, ಎಲ್ಲ ಧರ್ಮದ ಪ್ರಮುಖರು ಇದನ್ನು ಸ್ವಾಗತಿಸಬೇಕು ಎಂದರು. ಪಾಕಿಸ್ಥಾನದ ಪರವಾಗಿ ಇನ್ನೂ ಬಹಳಷ್ಟು ಮಂದಿಗೆ ಮನಸ್ಸಿದೆ.
ಇಂತಹ ವಿಚಾರದಲ್ಲಿ ಮುಸ್ಲಿಂ ಮುಖಂಡರು, ಹಿರಿಯರು ಹಾಗೂ ರಾಷ್ಟ್ರ ಭಕ್ತ ಮುಸ್ಲೀಮರು ತಮ್ಮ ಹುಡುಗರಿಗೆ ಮನಃಪರಿವರ್ತನೆ ಮಾಡಬೇಕು. ರಾಷ್ಟ್ರವನ್ನು ಪ್ರೇಮಿಸುವ ಮನಃಸ್ಥಿತಿಯನ್ನು ಬೆಳೆಸುವಲ್ಲಿ ಪ್ರಯತ್ನಗಳನ್ನು ಮಾಡಬೇಕು. ಇಲ್ಲದೇ ಹೋದಲ್ಲಿ ಇಂತಹ ದೇಶದ್ರೋಹಿ ಚಟುವಟಿಕೆಯ ಪರಿಣಾಮಗಳಿಂದ ನೀವೂ ಸಹ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
PublicNext
28/09/2022 05:14 pm