ಶಿವಮೊಗ್ಗ : ಮರ್ಕಾಜ್ಜಿ ಸುನ್ನಿ ಜಮಾಯತ್ ವುಲ್ ಉಲ್ಮಾ ಕಮಿಟಿ ಸುನ್ನಿ ಜಾಮೀಯಾ ಮಸೀದಿ ವತಿಯಿಂದ ಅ. 9 ರಂದು ನಗರದಲ್ಲಿ ಹಿಂದೂ –ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಾಮೀಯಾ ಮಸೀದಿಯ ಮಾಜಿ ಅಧ್ಯಕ್ಷ ಅಫ್ತಾಬ್ ಫರ್ವೀಜ್ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈದ್ ಮಿಲಾದ್ ಹಬ್ಬವನ್ನು ಜಗತ್ತಿಗೆ ಶಾಂತಿ ಸಾರಿದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬದ ಅಂಗವಾಗಿ ಆಚರಿಸಲಾಗುತ್ತಿದೆ. ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದವರು. ಜನಾಂಗೀಯ ಕಲಹ ಮತ್ತು ಸಮರಗಳಿಂದ ಛಿದ್ರವಾಗಿದ್ದ ರಾಷ್ಟ್ರಗಳನ್ನು ಶಾಂತಿಯತೆಯಿಂದ ಸರ್ವರೂ ಸಮಾನರು ಎಂಬ ತತ್ವ ಪಾಲಿಸಿ ಒಂದುಗೂಡಿಸಿದವರಾಗಿದ್ದರು.
ಈ ಹಬ್ಬದ ಅಂಗವಾಗಿ ಅಂದು ಮಧ್ಯಾಹ್ನ 2.30ಕ್ಕೆ ಶಾಂತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಮೆರವಣಿಗೆ ಸುನ್ನಿ ಜಾಮೀಯಾ ಮಸೀದಿಯಿಂದ ಆರಂಭಗೊಂಡು ನಗರದ ವಿವಿಧ ಬಡಾವಣೆಗಳ ಮೂಲಕ ಸಾಗಿ ಅಮೀರ್ ಅಹ್ಮದ್ ವೃತ್ತಕ್ಕೆ ಬಂದು ಸೇರುತ್ತದೆ. ಪ್ರತಿಯೊಬ್ಬರೂ ಶಿವಮೊಗ್ಗಕ್ಕೆ ಅಂಟಿದ ಕೆಟ್ಟ ಹೆಸರನ್ನು ಅಳಿಸೋಣ. ಎಲ್ಲರೂ ಕೂಡಿ ಶಾಂತಿ ಸೌಹಾರ್ದತೆ ಸಾರೋಣ ಎಂದಿದ್ದಾರೆ.
Kshetra Samachara
06/10/2022 05:01 pm