ಭಾರತದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಾಗುತ್ತಿದೆ. ವಿದ್ಯಾವಂತರು ಮಾತ್ರವಲ್ಲದೇ, ಅಶಿಕ್ಷಿತರು ಕೂಡ ಇದಕ್ಕೆ ಒಗ್ಗಿಕೊಂಡಿದ್ದಾರೆ. ಯಾವಾಗ ನೋಟು ಬ್ಯಾನ್ ಆಯ್ತು ನೋಡಿ ಜನ ಕ್ರಮೇಣ ಡಿಜಿಟಲ್ ಗೆ ವಾಲುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಯುಪಿಐ ಬಳಸಿ “ಕೋಲೆ ಬಸವ”ದೊಂದಿಗೆ ಬರುವ ವ್ಯಕ್ತಿಗೆ ಹಣ ನೀಡಿದ್ದಾರೆ. “ದೊಡ್ಡ ಮಟ್ಟದಲ್ಲಿ ಡಿಜಿಟಲ್ ಪಾವತಿಗೆ ಭಾರತದಲ್ಲಿ ಬದಲಾವಣೆ ಆಗಿದ್ದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕೆ” ಎಂದು ಮಹೀಂದ್ರಾ ಸಮೂಹದ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.
ಕೋಲೆ ಬಸವದ ಹಣೆ ಮೇಲೆ ನೇತು ಹಾಕಿರುವ ಯುಪಿಐ ಕೋಡ್ ಮೇಲೆ ವ್ಯಕ್ತಿಯೊಬ್ಬರು ಸ್ಕ್ಯಾನ್ ಮಾಡಿ, ಹಣ ಪಾವತಿಸುತ್ತಿದ್ದಾರೆ. ರಾಸುವಿನ ಜತೆಗಿರುವ ವ್ಯಕ್ತಿ ನಾದಸ್ವರವನ್ನು ನುಡಿಸುತ್ತಿರುವುದನ್ನು ಎಂಬುದು ವಿಡಿಯೋದಲ್ಲಿ ಕಂಡುಬರುತ್ತದೆ.ಇಂಟರ್ ನೆಟ್ ಮತ್ತು ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗುತ್ತಿದ್ದಂತೆ ದೇಶದಾದ್ಯಂತ ಡಿಜಿಟಲ್ ಪಾವತಿ ಜಾಸ್ತಿ ಆಗುತ್ತಿದೆ.
PublicNext
05/09/2022 09:12 pm