ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ನಂತರ ಸಾವು.!

ವಾಷಿಂಗ್ಟನ್‌: ಜಗತ್ತಿನಲ್ಲೇ ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ಅಮೆರಿಕದ ಡೇವಿಡ್‌ ಬೆನೆಟ್‌ (57) ಈಗ ಮೃತಪಟ್ಟಿದ್ದಾರೆ. ಮಂಗಳವಾರ (ಮಾರ್ಚ್ 8ರಂದು) ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್​​ನಲ್ಲಿ ವೈದ್ಯರ ಕೊನೆಯ ಪ್ರಯೋಗ ಫಲಿಸದ ಕಾರಣ ಡೇವಿಡ್ ಬೆನೆಟ್ ಸಾವೀಗಿಡಾಗಿದ್ದಾರೆ.

ಹಂದಿ ಹೃದಯ ಕಸಿ ಮಾಡಿಸಿಕೊಂಡು ಆರೋಗ್ಯದಿಂದಲೇ ಇದ್ದ ಬೆನೆಟ್‌ ಸಾವಿಗೆ ನಿಖರ ಕಾರಣವನ್ನು ವೈದ್ಯರು ಬಹಿರಂಗಪಡಿಸಿಲ್ಲ. ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಬೆನೆಟ್‌ ಅವರಿಗೆ ಜನವರಿ 7ರಂದು ಮೇರಿಲ್ಯಾಂಡ್‌ ಆಸ್ಪತ್ರೆ ವೈದ್ಯರು ಹಂದಿ ಹೃದಯದ ಕಸಿ ಮಾಡಿದ್ದರು. ಅತ್ಯುತ್ತಮ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯಾದ ಮೂರು ದಿನಗಳ ನಂತರ ಆತ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಮೇರಿಲ್ಯಾಂಡ್ ಆಸ್ಪತ್ರೆ ತಿಳಿಸಿತ್ತು. ಈಗ ಕೊನೆಗೂ ಅಸುನೀಗಿದ್ದಾರೆ.

Edited By : Vijay Kumar
PublicNext

PublicNext

10/03/2022 07:43 am

Cinque Terre

24.1 K

Cinque Terre

2