ನವದೆಹಲಿ: ದೇಶದಲ್ಲಿ ಸೆಮಿಕಂಡಕ್ಟರ್ಗಳ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಾವಿರರು ಕೋಟಿ ರೂ. ಪ್ರೋತ್ಸಾಹ ಧನವನ್ನು ಘೋಷಣೆ ಮಾಡಿದೆ.
ಹೌದು. ಇಂದು ಇಡೀ ವಿಶ್ವದಲ್ಲಿ ಬಂಗಾರಕ್ಕಿಂತ ಮಹತ್ವದ್ದು ಯಾವುದ್ದಾದರು ಇದ್ದರೆ ಅದು ಸೆಮಿಕಂಡಕ್ಟರ್ಸ್. ಇಂದು ಇಡೀ ವಿಶ್ವವೇ ಸೆಮಿಕಂಡಕ್ಟರ್ ಚಿಪ್ಗಳ ಅಭಾವವನ್ನು ಎದುರಿಸುತ್ತಿದೆ. ಇಷ್ಟು ದಿನ ಸೆಮಿಕಂಡಕ್ಟರ್ಗಾಗಿ ಚೀನಾದ ಮೇಲೆ ಇಡೀ ವಿಶ್ವ ಅವಲಂಬಿತವಾಗಿತ್ತು. ಜೊತೆಗೆ ತೈವಾನ್ ಕೂಡ ಸಾಕಷ್ಟು ಮುಂಚೂಣಿಯನ್ನು ಈ ರಂಗದಲ್ಲಿ ಕಾಯ್ದುಕೊಂಡಿದೆ. ಆದರೆ ಕೋವಿಡ್, ಅಮೆರಿಕನ್ ಸ್ಯಾಂಕ್ಷನ್ಸ್ ಮುಂತಾದ ಹಲವು ಅಡತಡೆಗಳಿಂದಾಗಿ, ಇಡೀ ಜಗತ್ತು ಇಂದು ಚಿಪ್ಗಳ ಅಭಾವವನ್ನು ಎದುರಿಸುತ್ತಿದೆ. ಹೀಗಾಗಿ ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನೆ ವಲಯವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಅದಕ್ಕಾಗಿಯೇ ಸುಮಾರು 76 ಸಾವಿರ ಕೋಟಿ ರೂಪಾಯಿಯ ಯೋಜನೆಗೆ ಇಂದು ಅನುಮತಿಯನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ದೇಶವು ಡಿಜಿಟಿಲೀಕರಣ ವಿಚಾರದಲ್ಲಿ ಮತ್ತಷ್ಟು ಸದೃಢರಾಗಲು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಬೋರ್ಡ್ ತಯಾರಿಕಾ ಪಿಎಲ್‌ಐ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ಯೋಜನೆಗೆ ಒಟ್ಟು 76 ಸಾವಿರ ಕೋಟಿಯನ್ನ ಮೀಸಲಿಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. 6 ವರ್ಷಗಳ ಅವಧಿಯಲ್ಲಿ ಸೆಮಿಕಂಡಕ್ಟರ್ & ಡಿಸ್ಪ್ಲೇ ಬೋರ್ಡ್ ನಿರ್ಮಾಣಕ್ಕೆ ಈ ಬಂಡವಾಳ ವಿನಿಯೋಗ ಆಗಲಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಕೇಂದ್ರ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಬೋರ್ಡ್‌ಗಳ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಪಿಎಲ್‌ಐ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
PublicNext
15/12/2021 04:29 pm