ಅಲಿಗಢ (ಉತ್ತರಪ್ರದೇಶ) : ಖಾನ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಕಾರಣಕ್ಕೆ ಉತ್ತರಪ್ರದೇಶದ ಬಿಜೆಪಿ ನಾಯಕಿ ರೂಬಿ ವಿರುದ್ಧ ಫತ್ವಾವನ್ನು ಹೊರಡಿಸಲಾಗಿದೆ.ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧ ಇರುವ ಕಾರಣ, ಅವರ ವಿರುದ್ಧ ದಿಯೋಬಂದಿ ಧರ್ಮಗುರು ಫತ್ವಾ ಹೊರಡಿಸಿದ್ದಾರೆ. ಉತ್ತರಪ್ರದೇಶದ ಅಲಿಗಢದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವಿಭಾಗೀಯ ಉಪಾಧ್ಯಕ್ಷೆಯೂ ಆಗಿರುವ ರೂಬಿ ಖಾನ್ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಗಣೇಶನನ್ನು ಪೂಜೆ ಮಾಡಿದ್ದರು. ಇದೇ ಅವರಿಗೆ ಈಗ ಮುಳುವಾಗಿದೆ.
ಇಸ್ಲಾಂ ಕಟ್ಟಳೆ ಮುರಿದ ಆರೋಪದ ಮೇಲೆ ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಗಣೇಶನನ್ನು ಹಿಂದೂಗಳು ಪೂಜಿಸುತ್ತಾರೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ. ಗಣೇಶನ ಪೂಜೆ ಮಾಡಿರುವುದಕ್ಕೆ ಧರ್ಮಗುರು ಮುಫ್ತಿ ಅರ್ಷದ್ ಫಾರೂಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಸ್ಲಾಂನಲ್ಲಿ ಅಲ್ಲಾನನ್ನು ಹೊರತುಪಡಿಸಿ ಯಾರನ್ನೂ ಪೂಜಿಸಲಾಗುವುದಿಲ್ಲ. ಇದನ್ನು ಮಾಡಿದವರು ಇಸ್ಲಾಂ ವಿರೋಧಿಗಳು ಮತ್ತು ಇದು ಇಸ್ಲಾಂ ವಿರೋಧಿ ಕೃತ್ಯವಾಗಿದೆ ಎಂದಿದ್ದಾರೆ.
PublicNext
04/09/2022 01:28 pm