ಗದಗ: ಎರಡು ವರ್ಷ ಕೊರೊನಾ ಕಾಟದಿಂದ ಮಂಕಾಗಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ ಸಿದ್ಧತೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಬಲು ಜೋರಾಗಿ ನಡೆಯುತ್ತಿದೆ.
ಪರಿಸರ ಸ್ನೇಹಿ ಗಣೇಶನಿಗೆ ಹೆಚ್ಚು ಒತ್ತು ಕೊಡುತ್ತಿರುವ ಕಲಾವಿದರು, ಸುತ್ತಮುತ್ತಲಿನ ಗ್ರಾಮದ ಜನರು ಮೂರ್ತಿಗಳ ಬುಕ್ಕಿಂಗ್ ಮಾಡುತ್ತಿದ್ದಾರೆ. ಕೆಲವು ಗಜಾನನೋತ್ಸವ ಮಂಡಳಿಗಳು ಈಗಾಗಲೇ ಮೂರ್ತಿಗಳನ್ನು ಮುಂಗಡವಾಗಿ ಕಾಯ್ದಿರಿಸಿ, ಹಬ್ಬದ ಸಿದ್ಧತೆಯಲ್ಲಿ ತೊಡಗಿವೆ.
ಶಿವ-ಪಾರ್ವತಿ ಗಣೇಶ, ನಿಂತಿರುವ, ಅರ್ಧ ಪದ್ಮಾಸನ, ಸುಖಾಸನ, ಡೋಲು, ವೀಣೆ, ಗಿಟಾರ್ ಮತ್ತಿತರ ಸಂಗೀತ ವಾದ್ಯ ಹಿಡಿದಿರುವ ಗಣೇಶ, ಹಾವಿನ ಹೆಡೆ ಮೇಲೆ, ಗೋವಿನೊಂದಿಗಿರುವ ಗಣೇಶ, ಶ್ರೀಕೃಷ್ಣ, ಪರಮೇಶ್ವರ ಅವತಾರದ ಗಣಪತಿ ಸೇರಿ ನಾನಾ ರೀತಿಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿದ್ದು, ಬೇಡಿಕೆಯೂ ಬಹಳಷ್ಟಿದೆ.
ಈ ಒಂದು ತಿಂಗಳು ಮುಂಚಿತವಾಗಿಯೇ ಗಣಪತಿ ಮೂರ್ತಿಗಳನ್ನು ಜನರು ಕಾಯ್ದಿರಿಸುತ್ತಿದ್ದಾರೆ. ಸಣ್ಣ ಗಣಪತಿಗಳಿಗೆ ಬೇಡಿಕೆ ತುಂಬಾ ಇದೆ. ಆದ್ದರಿಂದ ಅವುಗಳನ್ನೇ ಹೆಚ್ಚಾಗಿ ತಯಾರು ಮಾಡುತ್ತಿದ್ದೇವೆ ಎನ್ನುತ್ತಾರೆ ಕಲಾವಿದರು.
PublicNext
27/08/2022 09:22 pm