ನವದೆಹಲಿ: ಕೆಲ ಮುಸ್ಲಿಂ ಯುವಕರು ಚಲಿಸುತ್ತಿರುವ ರೈಲಿನಲ್ಲಿ ದಾರಿಯನ್ನು ಬಂದ್ ಮಾಡಿ ನಮಾಜ್ ಮಾಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಕೆಲ ಹಿಂದೂ ಸಂಘಟನೆಗಳು, ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಪೋಸ್ಟ್‌ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗಡೆ, "ಮೊದಲಿಗೆ ಅವರು ಬೀದಿಗಳನ್ನು ಆಕ್ರಮಿಸಿಕೊಂಡರು, ನಂತರ ಎಟಿಎಂಗಳನ್ನು ಆಕ್ರಮಿಸಿಕೊಂಡರು, ಈಗ ಅವರು ರೈಲಿನೊಳಗೂ ನಮಾಜ್ ಮಾಡುತ್ತಿದ್ದಾರೆ. ಇವರು ತಮ್ಮ ಮಿತಿಯನ್ನು ಮೀರುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
PublicNext
02/05/2022 03:41 pm