ಯಾದಗಿರಿ; ರಾಮನವಮಿ ಅಂಗವಾಗಿ ಇಂದು ಸುರಪುರದ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಯಾತ್ರೆ ನಡೆಯಿತು.
ಮೆರವಣಿಗೆಯಲ್ಲಿ ಶ್ರೀ ರಾಮ, ಆಂಜನೇಯ ಮೂರ್ತಿಗಳನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.ಇನ್ನು ರಾಮ್ ಸೇನಾ ವತಿಯಿಂದ ಡಿಜೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಹಿಂದೂ ಅಭಿಮಾನಿಗಳು ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು.
ರಾಮ ಸೇನಾ ಉತ್ತರ ಕರ್ನಾಟಕದ ಅಧ್ಯಕ್ಷ ರಂಗನಗೌಡ ದೇವಿಕೇರಾ, ಜಿಲ್ಲಾಧ್ಯಕ್ಷ ಶರಣು ನಾಯಕ ದೊಣ್ಣೆಗೇರಾ ಹಾಗೂ ತಾಲ್ಲೂಕು ಅಧ್ಯಕ್ಷ ಶರಣುಕುಮಾರ ದಿವಳಗುಡ್ಡ ನೇತೃತ್ವದಲ್ಲಿ ನಡೆದ ರಾಮನ ಅದ್ದೂರಿ ಶೋಭಯಾತ್ರೆಯಲ್ಲಿ ಸಾವಿರಾರು ಜನರು ಶ್ರೀ ರಾಮನ ಹಾಡಿಗೆ ಸಖತ್ ಸ್ಟೆಪ್ ಹಾಕಿದರು
ಇನ್ನು ನಗರದ ಗಾಂಧಿ ಚೌಕನಲ್ಲಿ ಮುಸ್ಲಿಂ ಬಾಂಧವರು ಹಿಂದೂ ಅಭಿಮಾನಿಗಳಿಗೆ ನೀರು ಹಾಗೂ ಜ್ಯೂಸ್ ಹಂಚಿ ಸೌಹಾರ್ದತೆ ಮೆರೆದರು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
15/04/2022 08:10 pm