ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

ನವದೆಹಲಿ: ಉತ್ತರಾಖಂಡ್ ರಾಜ್ಯದ ಕೇದಾರನಾಥ ತೀರ್ಥಕ್ಷೇತ್ರದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಳಿಸಿದ್ದಾರೆ. ವಿಶೇಷವೆಂದರೆ ಮೈಸೂರು ಮೂಲದ ಶಿಲ್ಪಿಗಳು ಈ ಪ್ರತಿಮೆಯನ್ನು ತಯಾರಿಸಿದ್ದಾರೆ.

ಇಂದು ಶುಕ್ರವಾರ ಬೆಳಿಗ್ಗೆ ಕೇದಾರನಾಥಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆಯು 35 ಟನ್‌ಗಳಷ್ಟು ತೂಗುತ್ತದೆ. 2013ರ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿಯ ಮೂಲ ಪ್ರತಿಮೆ ಕೊಚ್ಚಿ ಹೋಗಿತ್ತು. ಇದನ್ನು ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಮತ್ತು ಸಮಾಧಿ ಪ್ರದೇಶದ ಮಧ್ಯದಲ್ಲಿ ಭೂಮಿಯನ್ನು ಅಗೆದು ನಿರ್ಮಿಸಲಾಗಿದೆ. ಕ್ಲೋರೈಟ್ ಸ್ಕಿಸ್ಟ್ ಬಳಸಿ ಈ ಪ್ರತಿಮೆಯನ್ನು ಮೈಸೂರು ಮೂಲದ ಶಿಲ್ಪಿಗಳು ‌ನಿಂದ ತಯಾರಿಸಿದ್ದಾರೆ, ಇದು ಮಳೆ, ಬಿಸಿಲು ಮತ್ತು ಕಠಿಣ ಹವಾಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

Edited By : Nagaraj Tulugeri
PublicNext

PublicNext

05/11/2021 10:26 am

Cinque Terre

39.31 K

Cinque Terre

11