ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಪಿಎಪ್‌ಐ.ಎಸ್.ಡಿ.ಪಿ ಯಂಥಹ ಭಯೋತ್ಪಾದನೆ ಸಂಘಟನೆಗಳ ಮುಖಂಡರ ಮೇಲೆ ಇದ್ದ ಕೇಸ್‌ಗಳನ್ನು ರದ್ದು ಪಡಿಸುವ ಮೂಲಕ ಅವುಗಳ ಬೆಳವಣಿಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಕಾರಣವಾಗಿದೆ ಈಗ ಅವುಗಳ ನಿರ್ಮೂಲನೆ ಮಾಡಲು ಬಿಜೆಪಿ ಪಕ್ಷ ಕ್ರಮ ಕೈಗೊಂಡಿದೆ ಎಂದು ಮಾಜಿ ಸಂಸದರಾದ ಕೆ.ವೀರುಪಾಕ್ಷಪ್ಪ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಾಲಗುಂದ ಗ್ರಾಮದ ಮುಸ್ಲಿ ಯುವಕ 2047 ಇಸ್ವಿಯಲ್ಲಿ ಎಲ್ಲರ ತಲೆ ಮೇಲೆ ಟೋಪಿ ಹಾಕಿ ಮುಸ್ಲಿಮರ ರಾಷ್ಟ್ರ ಮಾಡುತ್ತೇವೆ ಎನ್ನುತ್ತಾನೆ ಎಂದರೆ ಏನು ಇದರರ್ಥ ಎಂದ ಅವರು ತಾಲೂಕಿನ ದಢೇಸೂಗೂರು ಗ್ರಾಮದಲ್ಲಿ ಗಣೇಶ ಹಬ್ಬದಲ್ಲಿ ಭಾರತ, ಪಾಕಿಸ್ತಾನದ ಬಗ್ಗೆ ಹಾಡು ಹಾಕಿದ್ದು ಪಾಕಿಸ್ತಾನ ವಿರುದ್ಧ ಟೀಕೆ ಮಾಡುವ ಹಾಡನ್ನು ಹಾಕಬೇಡಿ ಎಂದು ಮುಸ್ಲಿಮರು ವಿರೋಧ ಮಾಡುತ್ತಾರೆ. ಪಾಕಿಸ್ತಾನದ ಬಗ್ಗೆ ಟೀಕೆ ಮಾಡಿದರೆ ಇವರಿಗೇನು ತೊಂದರೆ ಎಂದು ಅವರು ಪತ್ರಕರ್ತರನ್ನು ಪಶ್ನಿಸಿದರು. ಮೊದಲು ಗುತ್ತಿಗೆ ಪ್ಯಾಕೇಜ ಪದ್ಧತಿ ಇರಲ್ಲಿಲ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಲಂಚ ಪಡೆಯುವ ಉದ್ದೇಶದಿಂದ ಪ್ಯಾಕೇಜ್ ಪದ್ದತಿಯನ್ನು ಜಾರಿಗೆ ತಂದು ಸಾಕಷ್ಟು ಭ್ರಷ್ಟಾಚಾರ ಮಾಡಿ ಅದನ್ನು ಎಸಿಬಿಯಿಂದ ಮುಚ್ಚಿ ಹಾಕಿಕೊಂಡರು ಅವರು ಭ್ರಷ್ಟಾಚಾರ ಮಾಡುವುದಿಲ್ಲ ಎಂದರೆ ಲೋಕಾಯುಕ್ತ ಸಂಸ್ಥೆಯನ್ನು ರದ್ದು ಮಾಡುತ್ತಿರಲಿಲ್ಲ ಎಂದರು.
ಮನೊಮೋಹನ ಸಿಂಗ್ ಇಂದಿರಾಗಾಂಧಿ ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಹಿರಿಯ ಮುಖಂಡರಾದ ರಮೇಶಕುಮಾರ ಮೂರು ತಲೆಮಾರಿಗೂ ಆಗುವಷ್ಷು ಆಸ್ತಿ ಮಾಡಲಾಗಿದೆ ಎಂದು ಸತ್ಯ ಒಪ್ಪಿಕೊಂಡಿದ್ದು ಈಗ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಗೆ ಇಲ್ಲ. ಬೀದಿಗಿಳಿದು ಪೋಷ್ಟರಗಳನ್ನು ಅಂಟಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವದು ಸರಿಯಲ್ಲ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ಸನವರು ಮಾತನಾಡುವದು ನೋಡಿದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ಲೇವಡಿ ಮಾಡಿದರು.
PublicNext
26/09/2022 04:32 pm