ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ರಾಷ್ಟ್ರಪತಿ ಹೆಸರಿನಲ್ಲಿ ಕುಂಭಾಭಿಷೇಕ ರಶೀದಿ

ರಾಯಚೂರು : ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇರುವಂತಹ ಭ್ರಮರಾಂಬಾ ದೇವಿ ದೇವಸ್ಥಾನದ ಶ್ರೀ ಮಹಾದೇವಿ ಕುಂಭಾಭಿಷೇಕ ಕಾರ್ಯಕ್ರಮದ ನಿಮಿತ್ಯ ರಾಷ್ಟ್ರಕ್ಕೆ ಮತ್ತು ರಾಷ್ಟ್ರಪತಿಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ರಶೀದಿ ಪಡೆದ ಭಕ್ತ.

ಹೌದು ಪ್ರತಿ ವರ್ಷ ದಸರಾ ನಿಮಿತ್ಯ ಮಸ್ಕಿ ಶ್ರೀ ಭ್ರಮರಾಂಭಾ ದೇವಸ್ಥಾನದಲ್ಲಿ ದೇವಿ ಪುರಾಣ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಈ ವೇಳೆ ಪುರಾಣಮಂಗಲ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾದೇವಿ ಕುಂಭಾಭಿಷೇಕ ಕಾರ್ಯಕ್ರಮವನ್ನು ಕೂಡ ಮಾಡಲಾಗುತ್ತದೆ. ಈ ವೇಳೆ ಎಲ್ಲಾ ವರ್ಗದ ಜನರು ಕೂಡ ತಮ್ಮ ಕುಟುಂಬಕ್ಕೆ, ಮಕ್ಕಳು, ಮೊಮ್ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ನೆಟ್ಟಿನಲ್ಲಿ ರಶೀದಿ ಪಡೆದು ಕುಂಭಮೇಳದಲ್ಲಿ ಭಾಗವಹಿಸಿ ಕುಂಭ ಕಳಷ. ಇದೇ ನಿಟ್ಟಿನಲ್ಲಿ ಮಸ್ಕಿ ಪಟ್ಟಣದ ಸಿದ್ದಯ್ಯ ಸ್ವಾಮಿ ಹಿರೇಮಠ ಎಂಬುವ ಭಕ್ತರು ರಾಷ್ಟ್ರಪತಿ, ಅದರಲ್ಲೂ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಕುಂಭಾಭಿಷೇಕದ ರಶೀದಿ ಪಡೆದು ಅವರ ಹೆಸರಿನಲ್ಲಿ ಓರ್ವ ಮಹಿಳೆಯಿಂದ ಕುಂಭ ಕಳಶ ಹೊರೆಸಲು ಸಿದ್ದವಾಗಿದ್ದು, ರಾಷ್ಟ್ರಪತಿಗಳಿಗೆ ಮತ್ತು ರಾಷ್ಟ್ರಕ್ಕೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ರಸೀದಿ ಪಡೆದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

08/10/2022 09:23 pm

Cinque Terre

1.02 K

Cinque Terre

0