ರಾಯಚೂರು: ಅ.11ರಂದು ವಿಶ್ವಶಾಂತಿಗಾಗಿ ಶಾಖಾಹಾರ ಬೃಹತ್ ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಉಪಾಧ್ಯಕ್ಷ ಕೋಟೇಶ್ವರಾವ್ ಹೇಳಿದ್ದಾರೆ.
ನಗರದ ಕರ್ನಾಟಕ ಸಂಘದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಗಳ ಮೂಲಕ ಹೋಂಟೆಲ್ ವರೆಗೆ ಜಾಥ ನಡೆಯಲಿದೆ. ನಂತರ ಧ್ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವ ಶಾಂತಿಗಾಗಿ ಸಮಸ್ತ ನಾಗರೀಕ ಆರೋಗ್ಯ ಮನಶಾಂತಿ ಆನಂದವಾಗಿ ಜೀವನ ನಡೆಸಲು ಈ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು,ರಾಯಚೂರು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ 2008 ರಿಂದ ರಾಯಚೂರು ನಗರದಲ್ಲಿ ಪ್ರಾರಂಭಗೊಂಡಿದ್ದು, ಸತತವಾಗಿ ಪತ್ರೀಜಿಯವರು ತಿಳಿಸಿಕೊಟ್ಟಿರುವ ಆನಾಪಾನಸತಿ ಧ್ಯಾನ ಶ್ವಾಸದ ಮೇಲೆ ಗಮನ, ಸಸ್ಯಾಹಾರ,ಪಿರಮಿಡ್ ಶಕ್ತಿ,ಅಹಿಂಸೆಯ ಬಗ್ಗೆ ರಾಯಚೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಾರ ಮಾಡುತ್ತಾ ಬಂದಿದ್ದಾರೆ ಎಂದರು.
Kshetra Samachara
10/10/2022 07:47 am